Posts

Showing posts from November, 2019
ಗ್ರೇಟಾ ಟುನ್ ಬರ್ಗ್(Greta Thunberg) ಎಂಬ ಸ್ವೀಡನ್ ದೇಶದ ಹದಿನಾರರ ಬಾಲೆ ಹವಾಮಾನ ಬದಲಾವಣೆಯಿಂದ ಪರಿಸರದ ಮೇಲಾಗುತ್ತಿರುವ   ದುಷ್ಪರಿಣಾಮದತ್ತ ಜಗತ್ತಿನ ಮಕ್ಕಳ ಗಮನ ಸೆಳೆಯಲು ಕಳೆದ 63 ವಾರಗಳಿಂದ ’Friday for Future ’ಎಂಬ ಚಳವಳಿ ನಡೆಸುತ್ತಿದ್ದಾಳೆ.’ನಮ್ಮ ಬಾಲ್ಯವನ್ನು,ಆಶೋತ್ತರಗಳನ್ನು ಹಾಳುಗೆಡುತ್ತಿರುವ ನಿಮಗೆಷ್ಟು ಧೈರ್ಯ?’ಎಂದು ಜಾಗತಿಕ ನೇತಾರರ ವಿರುದ್ಧ ಅಬ್ಬರಿಸಿದ್ದಾಳೆ. ಅವಳ ಹೋರಾಟ ಬೆಂಬಲಿಸಿ ,ಮಕ್ಕಳ ದಿನಾಚರಣೆಯ ಸಂದರ್ಭಕ್ಕೆ ಈ ಕವನ. ಹಿರಿಯರಿಗೊಂದು ಮನವಿ ನೀವು ಹಿರಿಯರು, ದೊಡ್ಡವರು ಎಲ್ಲಾ ತಿಳಿದವರೆಂದು ನಂಬಿದವರು ನಿಮಗೊಂದು ಮನವಿ   ಕಡೆಗಣಿಸದಿರಿ ನಿಮ್ಮ ಕುಡಿಗಳ ನಿಮ್ಮವಂಶ ವಾಹಿನಿಯ ಕೊಂಡಿಗಳ ಅವರ   ಕನಸುಗಳ,ಮಹದಾಸೆಗಳ ಅವರ ಭವಿತವ್ಯದ ಆಶೋತ್ತರಗಳ ಉಳಿಸಿ ಪ್ರಕೃತಿದತ್ತ ಉತ್ತುಂಗ   ಗಿರಿ ಶಿಖರ ಗುಡ್ಡ ಬೆಟ್ಟ ಬಯಲು ನದಿ,ಕಣಿವೆ ಕೊಳ್ಳ ಅನುಪಮ ಚೆಲುವು ನಿಬಿಡ ನಿಗೂಢ ಸ್ವಚ್ಚಂದ ಧೀರ ಗಂಭೀರ ಸುಂದರ ಪಶು ಪಕ್ಷಿ ಕೀಟ ಲೋಕವ ಕರಗಿಸದಿರಿ ಬೆಟ್ಟಸಾಲುಗಳ ಸವಾಲೆಸೆವ ಬಂಡೆಗಳ ಬರಿದಾಗಿಸದಿರಿ ರತ್ನಗರ್ಭ   ವಸುಧೆಯ ಕಟ್ಟಿ ಒಡ್ಡುಗಳ ಮುಳುಗಿಸದಿರಿ ನೆಲಸಿರಿಯ ಕಗ್ಗತ್ತಲು ಕಾಂತಾರ ವೈವಿಧ್ಯ ಜೀವರಾಶಿಯ ಪೇರಿಸದಿರಿ ಸಂಪತ್ತಿನ ಪ್ರಳಯಾಂತಕ ಗಬ್ಬು ಮಾಲಿನ್ಯ ರಾಶಿಯ ಹಿರಿಯರೇ,ಯುದ್ಧರೋಗ ಪೀಡಿತರೇ ಸಿಡಿಸಿ ಬಾಂಬುಗಳ ಹುಡಿ...