Posts

Showing posts from May, 2021

ತುಂಬಾ ದಿನಗಳಿಂ ಹಿರಿಯರು ಕೊಟ್ಟಿದ್ದಾದರೂ ಏನು ನಿಮಗೆ ಮಕ್ಕಳೇ ದರೆಯಂಚಿನಮರದ ಪರಿ ಈಗಲೋ ಆಗಲೋ ದೊಪ್ಪನೇ ಕುಸಿದು ಮಣ್ಣಡಿಗೆ ನಾವು, ನಮ್ಮ ತಲೆಮಾರು, ತರಹೇವಾರು ನೀವಿನ್ನೂ ಬೆಳಗಿನ ಮಂದಹಾಸ - ದೊಡ ದಾ0ಗುಡಿ ಇಡುವ ರಾಶಿ ರಾಶಿ ಆಶೋತ್ತರಗಳು ಹೊಳೆವ ಕನಸು ಕಂಗಳು ಆ ಬಳಿ ಈ ಬಳಿ ಎನ್ನದೇ ಎಲ್ಲರ ಮನೆ ಮನ ಬೆಳಗುವ ದೀವಿಗೆಗಳು, ಕುಡಿಗಳು, ಲತೆಗಳು ಪರಿಸರದ ಸುಂದರ ಸುಮಗಳು ನಿಮ್ಮ ಕಂಡಾಗಲೆಲ್ಲ ತಪ್ಪಿತಸ್ತ ಭಾವ ಏನೋ ಸಂಕಟ, ವಿವರಿಸಲಸದಳ ಹುತ್ತಗಟ್ಟುವ ಬೇಗುದಿ, ತಳಮಳ ನಮ್ಮೊಂದಿಗೇ ನೀವೂ ಬಂದಿಗಳು ಬದುಕು ಜಿಡ್ಡು ಗಟ್ಟಿದ ನಿಂತ ನೀರು ಏಕೆ ಏನು ಹೀಗೆ ಎಲ್ಲಿಯ ವರೆಗೆ ಹೀಗೆ ನಿಮ್ಮ ನೂರಾರು ಪ್ರಶ್ನೆಗಳಿಗೆ ಉತ್ತರಿಸಲು ಮುಖವಿಲ್ಲ ನಮಗೆ ಕ್ಷಮಿಸಿ ಮಕ್ಕಳೇ ಶಾಲೆಗಳಿಗೆ ಬೀಗ, ಪಾಠ ಪಠ್ಯ ದೂರ ಆಟೋಟ ಗದ್ದಲ ಕಲರವ ಬಯಲು ನೀರವ, ಗಾಢ ಮೌನ ಧ್ಯಾನಸ್ಥ ಅಕ್ಷರ ದೇಗುಲದ ಮೊರೆ ಸಾಕು ಮುನಿಸು, ನಿವಾರಿಸು ಆ ಅಲೆ ಈ ಅಲೆ ರೂಪಾOತರಿ ಭೀತಿ ಬಲೆಯ ಕಳಿಸು ಚಿಣ್ಣರ ಬೇಗ ದೊರೆಯೇ ಶಾಲೆಯ ಜೀವನಾಡಿ ಜೀವಕಳೆ ಅವರೇ ಈ ಆಲಯ ಬಯಲು ಇದ್ದರೂ ಇಲ್ಲದಾಗಿದೆ ಕ್ಷಮಿಸಿ ಮಕ್ಕಳೇ ಓದಿಸಿದ್ದು ಯಾರೋ ಬರೆದ ನಮ್ಮಿತಿಹಾಸ ಉಣಿಸಿದ್ದು ಕಲಬೆರಕೆ ಅರೆವಿಷದೂಟವ ಜೊತೆಗೊಂದಿಷ್ಟು ಅಣು ವಿಕಿರಣವ ಕುಡಿಸಿದ್ದು ಕೊಳಕು ಮಲಿನ ನೀರು ಉಸಿರ ಹಾದಿಗೆ ಇಂಗಾಲ ಧೂಮ ಮಾಲಿನ್ಯ ಉಲ್ಬಣ ಸಧ್ಯಕ್ಕೆ ಕರೋನಾ ಮುಂದೆ ಗೊತ್ತಿಲ್ಲ ಏನೇನೋ ಹುಟ್ಟಿಸಿದ ಕಾರಣಕೆ ನಿಮಗಿತ್ತೆವು ಪ್ರೀತಿ ನಿಜ , ಆದರೆ ನೀಡಲಿಲ್ಲ ನಿಮಗೆ ಉತ್ತಮ ನಿರುಮ್ಮಳ ನಿಶ್ಚಿಂತ ಬದುಕ ಅದೀಕ್ಷಣ ಈವರೆಗೂ ಮೃಗಜಲ ನಮ್ಮ ದುರಾಸೆ, ಚಾಪಲ್ಯ, ಹಣ ಹಪಾಹಪಿ ಭ್ರಷ್ಟತೆಗೆ ನಾಳೆಯಂತೂ ಪೂರಾ ಅಸ್ಪಷ್ಟ ನಡುದಾರಿಗೇ ನಿಮ್ಮ ಬಿಟ್ಟು ಮತ್ತೆ ಹೇಳಲು ಶಬ್ದಗಳಿಲ್ಲ ಕ್ಷಮಿಸಿ ಮಕ್ಕಳೇ ……

  ತುಂಬಾ ದಿನಗಳಿಂದ ಕಾಡುತ್ತಿದೆ ನಾವು ಹಿರಿಯರು  ಕೊಟ್ಟಿದ್ದಾದರೂ ಏನು ನಿಮಗೆ ಮಕ್ಕಳೇ  ದರೆಯಂಚಿನಮರದ ಪರಿ  ಈಗಲೋ  ಆಗಲೋ  ದೊಪ್ಪನೇ   ಕುಸಿದು ಮಣ್ಣಡಿಗೆ ನಾವು,  ನಮ್ಮ ತಲೆಮಾರು, ತರಹೇವಾರು  ನೀವಿನ್ನೂ  ಬೆಳಗಿನ ಮಂದಹಾಸ - ದೊಡ ದಾ0ಗುಡಿ ಇಡುವ      ರಾಶಿ ರಾಶಿ ಆಶೋತ್ತರಗಳು  ಹೊಳೆವ ಕನಸು ಕಂಗಳು  ಆ ಬಳಿ ಈ ಬಳಿ ಎನ್ನದೇ  ಎಲ್ಲರ ಮನೆ ಮನ ಬೆಳಗುವ  ದೀವಿಗೆಗಳು, ಕುಡಿಗಳು, ಲತೆಗಳು  ಪರಿಸರದ ಸುಂದರ  ಸುಮಗಳು  ನಿಮ್ಮ ಕಂಡಾಗಲೆಲ್ಲ ತಪ್ಪಿತಸ್ತ ಭಾವ  ಏನೋ ಸಂಕಟ, ವಿವರಿಸಲಸದಳ ಹುತ್ತಗಟ್ಟುವ  ಬೇಗುದಿ, ತಳಮಳ  ನಮ್ಮೊಂದಿಗೇ ನೀವೂ  ಬಂದಿಗಳು  ಬದುಕು ಜಿಡ್ಡು ಗಟ್ಟಿದ ನಿಂತ ನೀರು  ಏಕೆ ಏನು ಹೀಗೆ ಎಲ್ಲಿಯ ವರೆಗೆ  ಹೀಗೆ ನಿಮ್ಮ ನೂರಾರು ಪ್ರಶ್ನೆಗಳಿಗೆ  ಉತ್ತರಿಸಲು ಮುಖವಿಲ್ಲ ನಮಗೆ  ಕ್ಷಮಿಸಿ ಮಕ್ಕಳೇ  ಶಾಲೆಗಳಿಗೆ ಬೀಗ, ಪಾಠ ಪಠ್ಯ ದೂರ  ಆಟೋಟ ಗದ್ದಲ ಕಲರವ ಬಯಲು  ನೀರವ, ಗಾಢ ಮೌನ  ಧ್ಯಾನಸ್ಥ ಅಕ್ಷರ ದೇಗುಲದ ಮೊರೆ  ಸಾಕು ಮುನಿಸು, ನಿವಾರಿಸು ಆ ಅಲೆ ಈ ಅಲೆ ರೂಪಾOತರಿ ಭೀತಿ ಬಲೆಯ  ಕಳಿಸು ಚಿಣ್ಣರ ಬೇಗ ದೊರೆಯೇ  ಶಾಲೆಯ  ಜೀವನಾಡಿ   ಜೀವಕಳೆ ಅವರೇ ಈ ಆಲಯ ಬಯಲು ಇದ್ದರೂ ಇಲ್ಲದ...