Posts

Message to love in nature

  Descending clouds kissing hill tops Showering rain greening good earth Rivers gifting sweet water to oceans Rushing waves embracing beeches Flowering buds greeting at day break Spreading fragrance rejoicing hearts Enchanting blossoms, relishing fruits Amazing nature’s loving abundance Plants upright blinking green eyes Emitting air nectar caring living beings Creepers clasping beloved trees Birds nesting in tall green clusters Nature has its own message of love Human perception needs to realise ………Rajiv Ajjibal

ಕರುಣಿಸು ಮುಗಿಲೇ ಮಾಗಿಯ

  ಇಳೆಗಿಳಿಸೇ  ಮುಗಿಲೇ ಮಾಗಿಯ  ನೆನೆ ನೆನೆದು ಭುವಿ  ಅದ್ದಿ ಒದ್ದೆಯಾಗಿದೆ  ಸೇರಿದೆ ಕೊಯ್ದ ತೆನೆ ರಾಶಿ ನೀರಡಿಗೆ    ಮಣ್ಣ ಕುವರನ  ಕಣ್ಣು ಕೊಳವಾಗಿದೆ  ಹಿಂಗಾರುಸೋನೆ  ಕಣ್ಣೀರಾಗಿದೆ  ಉದುರಡಿಕೆ ತೇಲಿ ಹೋಗಿದೆ  ಸೊರಗಿದೆ ಬಳ್ಳಿ ಮೆಣಸು ಹೆದರಿದೆ  ಸುರಿಯೇ ಮಾಗಿಯ ಮುಗಿಲೇ  ಪೂಗ ಗೊನೆ ಮರ ನೆಲವನಪ್ಪಿದೆ  ಕದಳಿಯ ಬುಡ ಮೇಲಾಗಿದೆ  ಕೊಚ್ಚಿಹೋಗಿದೆ ನೀರುಕ್ಕಿ ಗೊಬ್ಬರ  ಕಳಿಸಿತ್ತ ತ್ವರಿತ ಮಾಗಿಯ  ಮುಗಿಲೇ  ಮಾಗಿಯ ಚಳಿಗೆ ಹಂಬಲಿಸಿದೆ ಮನ  ಮೈಗೆ ಬಿಗಿ ಬೆಚ್ಚನ ಉಡುಪು  ಹೊಡಸಲು ಗಡ ಗಡ ನಡುಕಕೆ  ಸುಮಧುರ ಕನಸಿನರಮನೆಗೆ ಏಕೆ ಬಂಧಿಸಿಹೆ  ಹೇಳೇ ಚಳಿಯ  ಕಳಿಸೇ ಮುಗಿಲೇ ಮಾಗಿಯ  ಮಾಗಿಯಿಲ್ಲದೆ ಉಂಟೇ ಸಂಭ್ರಮ ಒಣಗದ ಕಣಕೆ ಬಾರದು ಧಾನ್ಯ  ತುಂಬದು ರೈತರ ಹಿಗ್ಗಿನ ಕಣಜ   ಏನೋ ಕರಾಬು ಕರಾಮತಿ ಮೇಲೆ   ಮುಗ್ಗಿದೆ   ಬದುಕು ಭೂಮಿಯ ಮೇಗಡೆ  ಅರಿವಿಗೆ ಬಾರದು ಈ ಕಾಲಮಹಿಮೆ   ಕರುಣಿಸು ಬೇಗ ರವಿದರ್ಶನ ನಾಡಿಗೆ  ಮಾಗಿಯ ಬಂಧನ ಬಿಡಿಸೇ ಮುಗಿಲೇ  ……..ರಾಜೀವ ಅಜ್ಜೀಬಳ 
 ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ  ಅನಿಸಿದ್ದನ್ನ ಬರೆಯದಿದ್ದರೆ  ಹೇಳಬೇಕನಿಸಿದ್ದನ್ನು ಹೇಳದೇ ಇದ್ದರೆ  ಆ ಒಂದು ಶಬ್ದ, ಒಂದು ಮಾತು  ಒಂದು ನೊಂದಜೀವಕ್ಕೆ ಸಾಂತ್ವನ  ನೀಡುವಂತಿದ್ದರೆ  ಸುಂದರ ಭಾವನೆಗಳ ಒಡನಾಡಿಗಳಜೊತೆ  ಹಂಚಿಕೊಳ್ಳದಿದ್ದರೆ  ಒಮ್ಮೊಮ್ಮೆ ಚಿಂತೆಗಳ ಸಂತೆಯಲಿ  ಕಳೆದು ಹೋಗದಿದ್ದರೆ  ಸಹಜ ಗಿಡ ಮರಗಳ ಜೊತೆ  ಒಂದಿಷ್ಟು ಕಾಲ ಮೌನವಾಗಿ ಸಂಭಾಷಿಸದಿದ್ದರೆ  ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ  ನಗುವ ಕ್ಷಣದಲ್ಲಿ ಮುಖ ಬಿಗಿದುಕೊಂಡರೆ  ಉಕ್ಕಿಬಂದ ಅಶ್ರುಬಿಂದುಗಳ ಅದುಮಿಟ್ಟುಕೊಂಡರೆ  ಸಿಟ್ಟಿನ ಕೈಗೆ ಬುದ್ಧಿಯಿತ್ತು ಸಹನೆಗೆ ನೀರು ಬಿಟ್ಟರೆ   ತಾನಾಗಿ ಬಂದ  ಅವಕಾಶಗಳ  ನೀವಾಗೇ ಕೈಬಿಟ್ಟರೆ  ನೀವು ಏನನ್ನೋ ಕಳೆದುಕೊಳ್ಳುತ್ತಿದ್ದೀರಿ  ಹೂನಗೆಮೊಗ ಸೊಬಗ ಆನಂದಿಸದಿದ್ದರೆ  ಸಂಗೀತ ಕೇಳುತ್ತ ಕೆಲಕಾಲ ಮೈಮರೆಯದಿದ್ದರೆ  ಪ್ರಕೃತಿಯ ಅನುಪಮ ಚೆಲುವಿಗೆ ಮೂಕಸ್ಮಿತನಾಗದಿರೆ  ಆಗೊಮ್ಮೆ ಈಗೊಮ್ಮೆ ನಿಮ್ಮೊಂದಿಗೆ ನೀವೇ  ಮಾತಾಡಿ ಆತ್ಮಅವಲೋಕನಗೈಯದಿದ್ದರೆ  ನೀವೇನೋ ಕಳೆದುಕೊಳ್ಳುತ್ತಿದ್ದೀರಿ  ……….ರಾಜೀವ ಅಜ್ಜೀಬಳ   

ವಿನಾಶ ಕಾಲೇ

  ವಿನಾಶಕಾಲೇ  ಯುದ್ಧಾವೇಶ 1  ವಿಷ  ಕಕ್ಕುವ  ಡ್ರಾಗನ್ನು ಅದು  ಮೊದಲು ಗುಮ್ಮಿತು  ಮಾರಕ ವೈರಾಣು  ಬಳಿಕ  ಕೆಂಪು ತುಕಡಿ ಕಾಲ್ಕೆದರಿ ಕಿರಿಕಿರಿ  ದ್ವೇಷ, ಮೋಸ,   ತೀರದ ಭೂದಾಹ  ಯುದ್ಧ ವ್ಯಾಧಿ ಪೀಡಿತ, ಜನಭಾರ ದೇಶ  ಹುಟ್ಟಾ ಕಲಹ ನಿಪುಣ ನೇತಾರರು  ಇಲ್ಲಿ ಮಾತುಕತೆ, ಅಲ್ಲಿ ಕುಸ್ತಿ ಮಸ್ತಿ ಬೆನ್ನಿಗೆ ಚೂರಿ  ಹಿಮ ಹೊತ್ತಿ ಉರಿವ ಉತ್ತರಾOಚಲ ಅವರ ಕಪಟ  ಸ್ನೇಹ ನಂಬಿ ಕೆಟ್ಟವರು ನಾವು   ಗಡಿ ರಕ್ಷಣೆ ನಮಗನಿವಾರ್ಯ ಕರ್ಮ  ಶಾಂತಿಗೆ ಶಾಂತಿ, ಯುದ್ಧಕ್ಕೆ  ಉತ್ತರ ಯುದ್ಧ  ಆಯ್ಕೆ ಅವರದು, ಯಾವುದಕ್ಕೂ ನಾವು ಸಿದ್ಧ  2 ಯುದ್ಧದ ಸುದ್ದಿ ರೋಚಕ  ನೋಡಲು, ಕೇಳಲು, ಹೇಳಲು  ಏನು ನಡೆದರೂ ಅಲ್ಲಿ ಸರಿಯೇ?  ಬೇಕೇ ಹಿಂಸೆ, ಸಾವಿನ ಸರಣಿ ಹತ್ಯಾಕಾಂಡ  ವೀರ ಸ್ವರ್ಗ, ವೀರ ಮರಣ, ಹುತಾತ್ಮ ಪಟ್ಟ?  3 ಯುದ್ಧ ಕೊಲ್ಲುವುದು ಬಿಸಿರಕ್ತದ ಕನಸುಗಳ   ನಾಡಿನ ಭವಿಷ್ಯದ  ಜೀವ ಧಾತುಗಳ    ಆಜೀವ  ಶೋಕತಪ್ತ ಹೆತ್ತು ಹೊತ್ತವರ  ಕಣ್ಣೀರು ಕುಡಿವ ಮಡದಿ ಮಕ್ಕಳ  ಜನ ಮನಸು ಬದುಕು ಆಸೆ ಆಕಾಂಕ್ಷೆಗಳ  ಮುದ್ದು ಚಿಣ್ಣರ  ಚೆಂದದ ನಾಳೆಗಳ  ನೆಮ್ಮದಿ ಶಾಂತಿ ಸಹಜ ಜೀವನವ  4 ಯುದ್ಧಸ್ಯ ವಾರ್ತಾ ರಮ್ಯ  ಪರಿಣಾಮ ಘೋರ...

ಮುಂಗಾರು -20

 ಮುಂಗಾರು -20 ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಭಾರೀ ಮಳೆಗೆ  ಭೂಕುಸಿತ ಉಂಟಾಗಿ ಆದ ಅನಾಹುತ ಅಷ್ಟಿಷ್ಟಲ್ಲ. ಆ ಸಂದರ್ಭದಲ್ಲಿ ಬರೆದದ್ದು.  ನಿನ್ನೆಬಿದ್ದ ಕುಂಭದ್ರೋಣ ಮಳೆ ನೋಡಿ ಈ ಕವನ ನೆನಪಾಯ್ತು.  ಮುನಿದರೆ ಪ್ರಕೃತಿ ನೀನ್ಯಾವ ಲೆಕ್ಕವೊ?  ಮುನಿದರೆ ಪ್ರಕೃತಿ  ಮೇಘಸ್ಫೋಟ ಕುಂಭದ್ರೋಣ ಮಳೆ   ನೀನ್ಯಾವ ಲೆಕ್ಕಾನೋ ಮನುಜ?  ಮಾಡಿದ್ದುಣ್ಣೋ ಮಾರಾಯ  ಆಗುವುದೆಲ್ಲ ಆಗಿಹೋಗಿದೆ  ಹಿಂದೆ ಅಲ್ಲಿತ್ತು  ಹರಿದ್ವರ್ಣ  ಗುಡ್ಡದ ನೆತ್ತಿವರೆಗೂ  ಒತ್ತು ಒತ್ತಾಗಿದ್ದ ವಿಪಿನ  ಎಲ್ಲಾ ಸವರಿ ಸಂಹರಿಸಿ   ಐಶಾರಾಮಿ ಬಂಗಲೆಎಬ್ಬಿಸಿದೆ  ಹೆಸರು ಅಭಿವೃದ್ಧಿ  ದುರಾಸೆ, ದುರಹಂಕಾರ  ಹಣದ ಮದ ಆದದ್ದೇನೋ?  ನದಿಗಳುಕ್ಕಿ ಸೊಕ್ಕೇರಿ ಹರಿದಿವೆ  ಎತ್ತರೆತ್ತರ ಗಿರಿ ಕಾನನಗಳು  ಉಸ್ಸೆಂದು ಕುಸಿದು ಬಯಲಾಗಿವೆ  ಜನ ಜಾನುವಾರುಗಳು  ಕಾಲನ ದವಡೆಗೆ ಸಿಕ್ಕು  ಬದುಕು ಕೊಚ್ಚಿ ಹೋಗಿದೆ  ಜಲ ಮೂಲ ಮುಚ್ಚಿ ಹೋಗಿದೆ  ಕಟ್ಟಿಕೊಂಡ ಬದುಕು  ನೆಮ್ಮದಿ ವೈಭೋಗ  ಭೂತಕಾಲಕ್ಕೆ ಜರ್ರನೇ  ಸರಿದು ಹೋಗಿವೆ  ನೆತ್ತಿಗೇರಿದ್ದು ಇಳಿಯಿತೇನೋ?  ಎಲ್ಲಾ ಕಳೆದುಕೊಂಡಮೇಲಾದ್ರು  ನೊಂದು ನಲುಗಿದವರ  ಕಣ್ಣೀರಿನೊರತೆ ಬತ್ತಿ ಹೋಗಿದೆ  ಮೌನ ಹತಾಶೆ ಮಡುಗಟ್ಟಿದೆ...