ಹೊಸ ವರ್ಷ, ನವ ಸಂಕ್ರಾಂತಿ ಸಂದರ್ಭಕ್ಕೆ ಈ ಕವನ ಹೊಸತು ದಿನ ಹೊಸತು ಮನ ಹೊಸತು ದಿನ ಹೊಸತು ಮನ ಹೊಸತು ಭಾವ ಸ್ಪಂದನ ಹೊಸ ಬೆಳಗು ಹೊಸ ರಂಗು ನವನವೀನ ಜೀವನ ಬಾರಿ ಬಾರಿ ಕರೆದರೂ ಬರಲಾರದು ಗತ ದಿನ ಕಣ ಕಣ ದಲಿ ಹುಡುಕಿದರೂ ಸಿಗಲಾರದು ಗತ ಕ್ಷಣ ಹಕ್ಕಿಗಳಲಿ ಹಾಡನಿರಿಸಿ ಕಾಯುತಿದೆ ಮೂಡಣ ಹೂವ ಹಾಸ ಚೆಲು ಚೆಲುವು ಸುಗಂಧ ಮಯ ಚೇತನ ನಲಿವು ನೋವು ಬೆಳಗು ಬೈಗು ಸಮರಸವೀ ಜೀವನ ಬರುವುದೆಲ್ಲ ಬರುತಿರಲಿ ಬಾಳಿಗಿರಲಿ ಸಂಯಮ ನಿನ್ನೆ ಅಸ್ತ ವಾಗಿದೆ ಮೂಡಲಿಲ್ಲ ಹೊಸದಿನ ಜೊತೆಗೆ ಸಾಗಿ ಬರುತಿದೆ ವರ್ತಮಾನ ಈ ದಿನ ಕಟ್ಟಬೇಕು ನಮಗೆ ನಾವೇ ನಮ್ಮ ಬಾಳ ಕಂಕಣ ಶ್ರದ್ದೆ, ಶ್ರಮ ನಿಷ್ಠೆ ಯರಿವು ಪ್ರತಿ ದಿನ ಹೊಸ ದಿನ ..... ರಾಜೀವ ಅಜ್ಜಿಬಳ
Posts
Showing posts from December, 2019