Posts

Showing posts from June, 2021

ಪ್ಯಾಟೆ, ಹಳ್ಳಿ, ಮನೆ, ಮಗ, ತ್ವಾಟ

 ಅಡಿಕೆ ತೋಟ ಆಕ್ಸಿಜನ್ ಬಂಡಾರ -ಸುದ್ದಿ   ಸೊಕಾಗಿ ಹಿಂಗೇ ಒಂದು ಕವನ  ಪ್ಯಾಟೆ, ಹಳ್ಳಿ, ಮನೆ, ಮಗ, ತ್ವಾಟ ಇತ್ಯಾದಿ  ಹಾಂಗೆ ನೋಡಿದ್ರೆ ಆತ  ಎಂದೂ ಆಕಡೆ ಮುಖ ಹಾಕಿದವನಲ್ಲ  ತೋಟ ಗದ್ದೆ ಬೆಟ್ಟ ಬ್ಯಾಣ ಅಂದ್ರೆ ಅಷ್ಟಕಷ್ಟೇ  ಬಂದಾಗ ಅದೂ ಇದೂ ಉಭಯ ಕುಶಲೋಪರಿ  ಆಚಿಚೇ ಮನೆಗಳಿಗೆ ಹೀಗೆ ಹಲೋ  ಹಲೋ  ಇಲ್ಲಾ ಅಂದ್ರೆ  ಮೊಬಾಯಿಲು ಮೂತಿ ತಿಕ್ಕೋದು  ಅದಿಲ್ಲಾ ಮಳಕಂಡೆ ಚಡ್ಡಿಲೇ ಪ್ಯಾಟೆಗೆ ಹೋಪದು  ಅದೇನಾತಪಅಂದ್ರೆ  ತಿಂಗಳ  ಹಿಂದೆ   ಬಂದವ  ಆಸ್ರಿಗೆ ಕುಡದವನೇ  ದಡ ದಡ ತೋಟದ ಕಡೆ ದೌಡಾಯಿಯಿಸಿದ ವೀಳ್ಯದೆಲೆ ಬೆನ್ನಿನ ನಾರ ನಾಜೂಕಾಗಿ ಬಿಡಿಸಿ  ದಪ್ಪಗೆ ಸುಣ್ಣ ಸವರ್ತಇದ್ದ  ಅಪ್ಪ ವಿಚಾರಕ್ಕೆ ಬಿದ್ದ  ಅಥೋ, ಇದೆಂತಪ ಈ ಸರ್ತಿ ಈ ನಮ್ನಿ  ಬಾಯಲ್ಲಿದ್ದದ್ದ ಫುರ್ರಗುಡ್ಸಿ ಮತ್ತೆ ಈಡು ತುಂಬಿ ಕುಂತ  ‘ಅಪ್ಪಯ್ಯ ತೋಟಎಲ್ಲಾ  ಸುತ್ತಾಕಿ ಬಂದಿ ಈಗ  ಮಂಡಕಾದಗೆ  ಈಗಷ್ಟೆ ಒಣಗಿದ್ದು, ಆದ್ರೂ ತ್ವಾಟ ಹಸಿರಿದ್ದಾ  ಮಂಡಗಟ್ಟು  ಹಾಕಿದ್ರೆ…’. ಅಷ್ಟು ಕೇಳಿದ್ದೇ ಅಪ್ಪ ಆಕ್ಷಿ sssss ಅಂತ ಸೀನ ಹೊಡದ  ‘ಅದೇ… ಅದೇ.. ಆಕ್ಸಿಜನ್’  ಅಂದ   ಮಗ  ‘ತೋಟ ಅಂದ್ರೆ ಭಾರಿ ಖುಷಿ, ಪ್ರತಿ ಅಡಿಕೆ ಮರ  ಅಷ್ಟು ಉದ್ದಕ್ಕೂ  ಆಕ್ಷಿಜನ ಸಿಲಿಂ...

ನಿತ್ಯ ಸುಂದರೀ ವಸುಂಧರಾ

 ಅನುಪಮ ಸುಂದರ ಈ ಭೂಮಿ. ಮರ ಕಟುಕರಿಂದ ಕಾಪಾಡಿದರೆ ಬೇಕಾದ್ದು  ನಿನಗೀವೆ ಎನುತ್ತಿರುತ್ತದೆ. ಮೊದಲು ಆಗಬೇಕಾದ್ದು  ಜನಸಂಖ್ಯಾ ನಿಯಂತ್ರಣ.  ಪ್ರಕೃತಿಯ  ಸಮೃದ್ಧಿಯನ್ನು ಸಾರುವ  ಈ ಗೀತೆಯನ್ನು  ನೃತ್ಯ ರೂಪಕ್ಕೆ ಅಳವಡಿಸಿ ವಿದ್ಯಾರ್ಥಿಗಳಿಂದ  ಪ್ರದರ್ಶಿಸಿದ್ದರು ಶ್ರೀಮತಿ ಗಂಗಾಬಾಯಿ ಮತ್ತು ಸಂಗಡಿಗರು.  ನಿತ್ಯ ಸುಂದರೀ ವಸುಂಧರಾ  ಎನಿತು ಬಗೆ ಚಿಗುರು ಹಸಿರು ಹೂ ಹಣ್ಣು  ಬಣ್ಣನೆಗೆ ಸಿಗದಂತ ಬಣ್ಣ ಬೆಡಗು   ಮುಗಿಲೆತ್ತರಕೆ  ಭುವಿ   ಬರೆದ ಚಿತ್ತಾರ  ಭವ್ಯ  ಭೂರಮೆ  ಸತ್ಯ  ಶಿವ ಸಾಕಾರ  …………………….ನಿತ್ಯ ಸುಂದರೀ ವಸುಂಧರಾ   ಹಿಮಾಲಯ ವಿಂಧ್ಯಗಿರಿ ಸಹ್ಯಾದ್ರಿ ಶೃಂಗ  ಸಿಂಧು ಗಂಗೆ ಯಮುನೆ ಕಾವೇರಿ ಕೃಷ್ಟನೇ ಕಾಳಿ ಅಘನಾಶಿನಿ ಕಣಿವೆ ಕೊಳ್ಳ  ಹರಿದ್ವರ್ಣ  ಬೀಟೆ ಮತ್ತಿ ದೇವದಾರು ಸಿರಿ ಗಂಧ ಚಂದ  …………………ಸಸ್ಯ ಶ್ಯಾಮಲಾ ವಸುಂಧರಾ  ಐಶ್ವರ್ಯ ನೆಲದೊಡಲು ಅನರ್ಘ್ಯ ಸಿರಿಲಭ್ಯ  ಬಹುಸಾರ ಭೂರುಹ   ಸಮಹಿತ  ಸುಭಿಕ್ಷ  ಜಲ ಅನಿಲ  ಜ್ಯೋತಿ  ಶಕ್ತಿ ಸಂಪನ್ಮೂಲ  ತರು ಲತೆ ವಿಪಿನ ಸಂಜೀವಿನಿ ಸಮೂಲ  …………………….ರತ್ನಗರ್ಭಾ ವಸುಂಧರಾ  ಹಸಿರು ಹುಲ್ಲೆಲೆ  ಹೂಗೆ ಬಂಗಾರ ಮುತ್ತು ಮಣಿ  ಪ್ರತಿ ನಯನ ತಾ...