ಕರೋನಾ -ಒಂದು ಆಪ್ತ ಸಂವಾದ ಬ್ರಿಟನ್ದಲ್ಲಿ ಲಾಕ್ಡೌನ್ ಹಾಕಿಸಿ ಬೀಗುತ್ತ ಬಂದ ಕರೋನಾ ಕಂಡದ್ದೇ ಹೆದರಿ 'ಕ್ಯಾ ಕರನಾ ಕರೋನಾ? ' ಎನ್ನುತ್ತಾ ನಿಂತೆ ಪೆಕ್ರನಂತೆ ನಕ್ಕಿತು ಅದು ಪಕ ಪಕನೆ ಹುಬ್ಬು ಏರಿಸಿ,' ಎಲ್ಲೋ ಸೋಸಿಯಲ್ ಅಂತರ? ' ಎಂದದ್ದೇ ಬಡ ಬಡ ದೂರ ನಿಂತೆ ಕಕ ಮಕ ನೋಡಿತು ಮುಖವ ಗೊತ್ತಾಯ್ತು ಕಿಸೆಗೆ ಕೈ ಹಾಕಿದೆ ' ಮುಖ ಲಂಗೋಟಿ ' ಮತ್ತೆ ನಗು ಸೊಂಟ ಲಂಗೋಟಿ, ಕಂಠ ಲಂಗೋಟಿ ಗೊತ್ತಿತ್ತು ನನಗೆ.ಇದು ಹೊಸದು ' ಹೇಗಿದೆ? ಇದು ಇಂದಿನ ಫ್ಯಾಶನ್ ' ತನ್ನ ಉರುಟು ಮೈಯ ಕಡ್ಡಿಗಳ ಇನ್ನೂ ಉದ್ದ ನಿಗುರಿಸಿ ಬೀಗಿತು 'ಸುಂದರ ಮುಖಾರವಿಂದ ಗಳಿಗೆ ಗ್ರಹಣ ಹಿಡಿಸಿದೆ ಮಾದಕ ಚೆಲು ನಗುವ ಅಪಹರಿಸಿದೆ ' ಅಲವತ್ತುಕೊಂಡೆ 'ಇನ್ನೆಷ್ಟು ಹೆಣ ಬೀಳಲಿದೆ ಈ ಬಾರಿ? 'ಎಂದೆ ವಿಷಯ ಬದಲಿಸಿ ' ಗೊತ್ತಿಲ್ಲ ನನಗೆ ಹೆದರಿ ಸಾಯುವವವರ ಲೆಕ್ಕ ' ಗಹಗಹಿಸಿತು 'ಲಸಿಕೆ ಬಂದಿದೆ, ನಿನ್ನ ಪ್ರತಾಪ ನಡೆಯದು ಬಹಳ ದಿನ ಎಂದೆ ' 'ಹೋಗಲು ಬಂದವನಲ್ಲ ನಿಮ್ಮೊಡನೆ ಇರಲು ಬಂದವ ' ಕಣ್ಣ ಕೆಕ್ಕರಿಸಿತು ನಾನು ಓಡುವದರಲ್ಲಿದ್ದೆ 'ಹೆದರು ಪುಕ್ಕ ಹೆದರಿದರೆ ಹ...
Posts
Showing posts from April, 2021
- Get link
- X
- Other Apps
ಬನವಾಸಿ ಕದಂಬಪಂಫೋತ್ಸವ ಸಂದರ್ಭಕ್ಕೆ ನೆನೆ ನೆನೆದು ಬನವಾಸಿ ಬರೆದ ಭಾರತವ ಕಲಿಯಾಗಿ ಬಂದ, ಮಹಾಕವಿಯಾಗಿ ಬೆಳೆದ ಆದಿ ಕವಿ ಪಂಪ, ಎರೆದ ನೆಲ ನುಡಿಗೆ ಕಂಪ ಮಾoದರಿಳ ಸೊoಪಿನಲಿ, ಕೋಗಿಲೆಗಳಿಂಪಿನಲಿ ದುಂಬಿಗಳ ಕಲರವ, ಹೂತ ಮರ ಮರಗಳಲಿ ಬನವಸೆಯ ವನಸಿರಿಗೆ ಮನಸೋತ ಕಲಿ ಪಂಪ ಅಂಕುಶವ ತೊರೆದನವ, ಹಿಡಿದ ಲೇಖನಿಯ ಪ್ರಕೃತಿ ಸಿರಿ ಸೊಬಗಿನಲಿ ದಿವ್ಯಾನುಭೂತಿಯಲಿ ನವ ಭಾವ ಅಂಕುರಿಸಿ, ಮೆರೆದ ಕವಿ ಜೀವಿ ರಣರಂಗದಿಂದಾತ ಅಂತರಂಗಕೆ ನಡೆದ ಅರುಹಂತ ಪಂಪ, ಕನ್ನುಡಿಗಿಟ್ಟ ಮುಕುಟ ಮಾನವ ಕುಲ ತಾನೊಂದೆ ವಲಂ ಎಂದ ನೋವು ಯಾತನೆ ಕದನ ಸಲ್ಲದೆಂದ ಹುಟ್ಟಿದರೆ ಮತ್ತೊಮ್ಮೆ ಬನವಾಸಿಯಲ್ಲೆoದ ಮರಿ ದುಂಬಿ ಯಾ ಕೋಗಿಲೆಯಾಗಿರುವೆನೆಂದ ಜಯಂತಿಯ ನೆಲದಲಿ ವರದೆ ಯ ತೀರದಲಿ ಮಧುಕೇಶನನುಭೂತಿ ಭಕ್ತಿ ಭಾವದಲಿ ಚೂತ ವನ ಚಿಗುರಿನಲಿ ಪಂಪ ಪಾವನನಾದ ನೆನೆ ನೆನೆದು ಬನವಾಸಿ ಬರೆದ ಭಾರತವ .......ರಾಜೀವ ಅಜ್ಜೀಬಳ
- Get link
- X
- Other Apps
ಎಲ್ಲಿಯದೋ ಗಂಡು, ಎಲ್ಲಿಯದೋ ಹೆಣ್ಣು ಕೂಡಿ ನಡೆವ ದಾಂಪತ್ಯದ ಪರಿ ಅಚ್ಚರಿ ಒಂದು ದಾಂಪತ್ಯ ಗೀತೆ ಅನುಬಂಧ ನಾನೆಲ್ಲಿಯೋ ನೀನೆಲ್ಲಿಯೋ ಹೇಗೆ ಬಂದೆವಿಲ್ಲಿಗೆ? ಜೀವ ಹಿಗ್ಗಿ ಅರಳಿದೆ ನಡೆವ ದಾರಿ ಎಲ್ಲಿಗೆ? ನನ್ನ ನಿನ್ನದೆಯ ಧ್ವನಿಗೆ ಸಾನುರಾಗ ಸೊಗಸಿದೆ ಕಣ್ಣ ಭಾಷೆ ಕವನಕೆ ತುಟಿಯುಲಿತದ ಶೃತಿಯಿದೆ ಮಾತಿಗೆನಿತು ಪದವಿಹುದು ನೋಟವೇ ಪ್ರಿಯವೆನಿಸಿದೆ ಯಾವುದೋ ರಸಗಾನ ಲಹರಿ ನಮ್ಮ ನಡುವೆ ಹರಿದಿದೆ ನಾನೆಲ್ಲಿಯೋ ನೀನೆಲ್ಲಿಯೋ ಏಕೆ ಬಂದೆವಿಲ್ಲಿಗೆ? ಯಾವ ಪೂರ್ವಾನುಬಂಧ ನಮ್ಮ ತಂದಿತಿಲ್ಲಿಗೆ? ..... ರಾಜೀವ ಅಜ್ಜಿಬಳ
- Get link
- X
- Other Apps
ಕರೋನಾ ಕಾಟ ಮತ್ತೆ ಶುರುವಾಗಿದೆ. ಮುಖ ಗವುಸಿನಡಿ ನಗುವೆಂಬ ನಿಧಿ ಕಳೆದು ಹೋಗಿದೆ. ಆದರೂ ಅಪರೂಪಕ್ಕೊಮ್ಮೆ ಕಂಡಾಗ ಸಹಜ ನಗುಮೊಗವೆಂಬ ನಿಧಿಯ ಆ ನಗುಮೊಗದ ಜೊತೆಜೊತೆಯಲಿ ಸಾಗಿ ಬಂದವು ಏನೆಲ್ಲಾ ಆಶಯಗಳು ಆ ನಗು ಸುರಿದ ಪ್ರಭೆಯಲ್ಲಿ ಅಂಗಳ ಹೂವಾಗಲಿ ಮನುಜ ಪ್ರೀತಿ ಪರಿಮಳಿಸಲಿ ಆ ನಗು ಚೆಲ್ಲಿದ ತುಂತುರು ಹನಿಗಳಡಿ ಕವಿತೆ ಚಿಗಿಯಲಿ, ಕವನ ಬನವಾಗಲಿ ಆ ನಿರ್ಮಲ ನಗೆಯ ಜುಳು ಜುಳು ಝರಿಯಲಿ ಕೊಚ್ಚಿ ಹೋಗಲಿ ಮನದಿ ಮಲೆತ ಕೊಳೆ ಕೊಚ್ಛೆ ಕೆಸರು ಆ ಮೊಗದ ಮಂದಹಾಸದಲಿ ವೃದ್ಧಿಸಲಿ ಅಕ್ಷರ ಪ್ರೀತಿ, ನಡೆ ನುಡಿ ರೀತಿ ನೀತಿ ಅದರ ತಂಪಾದ ನೆರಳಲಿ ನಲಿದಾಡಲಿ ಮಕ್ಕಳು ಮರಿ ಆ ಅಕಳಂಕ ನಗೆಯ ವರ್ಷಧಾರೆಗೆ ತೆನೆ ತೊನೆದಾಡಿ ಅನ್ನವಾಗಲಿ ಹಸಿದೊಡಲಿಗೆ ಆ ಮೊಗದ ನಿರುಮ್ಮಳ ಹಾಸ ಬವಣೆ ಬೇಗುದಿ ಬೇನೆಯಲಿ ಬೆಂದು ನೊಂದವರಿಗೆ ಸಾಂತ್ವನ ವೀಯಲಿ. ಆ ನಗುಮೊಗವ ಈ ಧರೆಗಿತ್ತ ಹೆತ್ತವರು ನೂರ್ಕಾಲ ಹಿತದಿ ಬಾಳಲಿ ………ರಾಜೀವ ಅಜ್ಜೀಬಳ
- Get link
- X
- Other Apps
ಇದೀಗ ನಮ್ಮಲ್ಲಿ ಇಡೀ ದಿನ ಮಳೆ ಸೊಬಗು. ಮುಂಗಾರಿನ ಹನಿಗಳು ಕಿವಿ ಬಿರಿವ ಡೋಲು, ಕೋಲು ಮಿಂಚು ಏನಾಗಿದೆ ಬಾನಿಗೆ? ಅದು ಮೆರವಣಿಗೆ, ಕರೆತರಲು ಮುಂಗಾರನು ಮೇದಿನಿಗೆ ****- ಭೋರ್ಗರೆಯಿತು ಬಿರುಗಾಳಿ ಮಳೆ ತಿಕ್ಕಾಡಿದವು ಗಿಡ ಮರಗಳು ಭುವಿಯ ಸಂಧಿಗೊಂದಿಗಳಿಂದ ದಿಗ್ಗನೇ ಕಣ್ತೆರೆದವು ತೊರೆಗಳು **** ಧಾರೆಮಳೆಗೂ ಉಂಟು ಸುರ ಲಯ ಸಿಂಗಾರ ಕೇಳು, ಆಲಿಸಿದರದು ರಾಗ ಮೇಘಮಲ್ಹಾರ **** ಯಾರೆಂದರು ಮಳೆಯೆಂದರೆ ಮುಸಿ ಮುಸಿ ಅಳುವೆಂದು? ಕಾದು ಕಂಗೆಟ್ಟ ನೆಲದೊಡಲಿಗದು ಮುಗಿಲು ಸುರಿವ ಅಮೃತ ಬಿಂದು **** ಸುರಿದಾಗ ಮೊದಲ ಮಳೆ ನಿರುಕಿಸಿದೆ ಎಲ್ಲೆಡೆಗೆ ಕಮ್ಮನೆ ನುಗ್ಗಿತು ಮಣ್ಣ ಪರಿಮಳ ಹೊಸ ಹಸಿರು ಹೂ ಕವನ **** ರಾಜೀವ ಅಜ್ಜೀಬಳ
- Get link
- X
- Other Apps
ನಿಮ್ಮ ಗಮನಕ್ಕೆ ಇಂತವರು ಬಂದಿರುತ್ತಾರೆ ಆಗೀಗ ಅಲ್ಲವೇ? ಸ್ವಾನಂದ ಟೀಕಾನಂದರು ಏತಿ ಎಂದರೆ ನೇತಿ ಎನ್ನುವರು ಹಾಗೆಂದರೆ ಹೀಗೇ ಎನ್ನುವರು ತಲೆ ಎಂದರೆ ಕಾಲೆಳೆವರು ಕೊಡಿ ಎಂದರೆ ಕೈಕೊಡುವರು ಸ್ವಾನಂದ ಟೀಕಾನಂದರು ಬೆಳಕೆoದರೆ ಬೆಂಕಿಯಾಗುವರು ಉರಿಎಂದು ಉರಿದು ಬೀಳುವರು ಪಾಪಿಗಳಿಗೆ ಪಾಪ ಎನುವರು ಉದ್ದಟರನು ಮುಗ್ಧರೆನುವರು ಸ್ವಾನಂದ ಟೀಕಾನಂದರು ಶತಮೂರ್ಖರನು ಎತ್ತಿ ಹೊಗಳುವರು ಮುಟ್ಟಾಳ ರಿಗೆ ಬೆನ್ನು ತಟ್ಟುವರು ಹೇಳಿದ್ದೇ ಸರಿ ವಾದಿಸುವರು ಕೇಡು ನುಡಿಗಳ ವಾರಸುದಾರರು ಸ್ವಾನಂದ ಟೀಕಾನಂದರು ಹೂಗಳೆOದರೆ ಮುಳ್ಳೇ ಎನ್ನುವರು ಅಕ್ಷರವೆಲ್ಲ ಅಲಗೆನ್ನುವರು ಮುನ್ನಡೆಎಂದರೆ ಹಿಂದೋಡುವರು ಹಿನ್ನಡೆಯುವುದೇ ಸರಿ ಎನ್ನುವರು ಸ್ವಾನಂದ ಟೀಕಾನಂದರು ಸುದ್ದಿ ಪೆಟ್ಟಿಗೆಯಲಿ ಕಂಗೊಳಿಸುವರು ವಾರ್ತಾಲಾಪದಿ ಮಿಂಚುವರು ದಿನವಿಡಿ ಒಡಕು ಸುದ್ದಿ ವೀರರು ತಲೆ ಕೆಡಿಸಿ ಸಂತಸ ಪಡುವರು ಸ್ವಾನಂದ ಟೀಕಾನಂದರು ...ರಾಜೀವ ಅಜ್ಜೀಬಳ
- Get link
- X
- Other Apps
ಅನುದಿನದ ಗುನುಗು ಒಂದು ಪುಟ್ಟ ದಾಂಪತ್ಯ ಗೀತೆ ನೀ -ನಾ ನೀನು ಹೂವು ನಾನು ಭ್ರOಗ ಬಾಳು ಮಕರಂದ ನೀನು ರಾಗ ನಾನು ತಾಳ ಬಾಳು ಸಾನುರಾಗ ನೀನು ಗಾನ ನಾನು ಕವನ ಬಾಳು ವಿಕಸಿತವನ ನೀನು ಹಕ್ಕಿ ನಾನು ಗೂಡು ಬಾಳು ಉದಯಗಾನ ನೀನು ಭೂಮಿ ನಾನು ಭಾನು ಬಾಳು ರಮ್ಯ ಕಿರಣ ನೀನು ಜೀವ ನಾನು ಭಾವ ಬಾಳು ದಿವ್ಯ ಬಂಧನ ನೀನು ಪ್ರಕೃತಿ ನಾನು ಪುರುಷ ಆತ್ಮ ಅಮರ ಜ್ಯೋತಿ ....... ರಾಜೀವ ಅಜ್ಜೀಬಳ
- Get link
- X
- Other Apps
ಸುಮ್ಮನೆ ಹೀಗೊಂದು ಕರೋನಾ ಕವನ ಕರೋನಾ ದಂಡಯಾತ್ರೆ, ನಗು, ಅಳು ದುಗುಡ ದುಮ್ಮಾನ ಕುದಿ ಬಂಡಿಯಿಂದ ಅಷ್ಟೇ ತೆಗೆದ ತಾಜಾ ಉದ್ದಿನ ಬೋಂಡಾ ಅದೇ ಆ ಮೊಗ ನಕ್ಕರೆ, ಕಣ್ಣೆದುರಲಿ ಸೂರ್ಯಕಾಂತಿ ಸಂಜೆಗಾದ್ರೆ ಚಂದ್ರಕಾಂತಿ -ಚವತಿ ಚಂದ್ರ ದಂತಸಾಲು ಆಹಾ, ಸುಲಿದ ಕುಂಡಿಗೆ ಜೋಳ, ದಾಳಿಂಬೆ ಬೀಜ, ಕಾಡು ಮಲ್ಲಿಗೆ ಛೇ, ಬೇಡ ಬಿಡಿ ಬಳಸಿ,ಸವೆದು ಮಾಸಿದ ಹೋಲಿಕೆ ಸಾದಾ ಸೀದಾ ಫಳ ಫಳ, ಫಳ ಫಳಾ ಹೇಗಿದೆ ಎಂದೆ , ಕವಿ ಮಿತ್ರ ಕನಲಿದ ‘ನಿನ್ನ ತಲೆ ಬೊಂಡ, ಸೋಜಿದ್ದೀಯಾ ಕೊರೋನಾ ಎರಡನೇ ದಂಡಯಾತ್ರೆ ಈಗ, ಬದುಕು ಉಳಿದರೆ ಸಾಕು ‘ ಸಿಗಿಸಿದ್ದನವ ಎರಡು ಮುಖ ಗವಸು ಒಂದರ ಮೇಲೊಂದು ‘ಛಾತಿ ಇದ್ದರೆ ಬರೆ ನೋಡುವಾ ಕಾಣದ ಮುಸುಕಿನೊಳಗಣ ನಗೆಯ ಚೆಲುವ ಕಾವಳದಲ್ಲಿಯೂ ಚಿತ್ರ ಬಿಡಿಸುವ ಕಲೆ ಕಾವ್ಯ ಆಗ ನೀ ಕವಿ, ಅದು ಕವನ, ‘ಎಂದ ‘ಖರೇ ಅಂದ್ರೆ , ನಿಜ್ವಾಗ್ಲೂ ನೀನೇ ಕವಿ’ ಎಂದೆ ಕೆಮ್ಮಿದ, ಸಿಡಿದು ದೂರ ನಿಂತೆ ಅವನ ಮುಖ ಮುಚ್ಚಿಗೆ ಒಂದೇ ಬಾರಿಗೆ ಮೂಗು ಬಾಯಲ್ಲಿ ಗುಂಡಿ ತೋಡಿ ಬಂತು ಫಕ್ಕನೆ ಕಣ್ಣಲ್ಲಿ ನೀರು, ಮಾತು ಗ ಗ ಗ ‘ಹೇಗೋ ಕಳಿತು ನಮ್ಮ ಕಾಲ ಮಿತ್ರಾ ನಾಳೆ ಮಕ್ಕಳು ಮರಿಗಳ ಗತಿ ಹೇಗೋ ‘ ಮತ್ತ...