ಪ್ಯಾಟೆ, ಹಳ್ಳಿ, ಮನೆ, ಮಗ, ತ್ವಾಟ

 ಅಡಿಕೆ ತೋಟ ಆಕ್ಸಿಜನ್ ಬಂಡಾರ -ಸುದ್ದಿ 

 ಸೊಕಾಗಿ ಹಿಂಗೇ ಒಂದು ಕವನ 


ಪ್ಯಾಟೆ, ಹಳ್ಳಿ, ಮನೆ, ಮಗ, ತ್ವಾಟ ಇತ್ಯಾದಿ 


ಹಾಂಗೆ ನೋಡಿದ್ರೆ ಆತ 

ಎಂದೂ ಆಕಡೆ ಮುಖ ಹಾಕಿದವನಲ್ಲ 

ತೋಟ ಗದ್ದೆ ಬೆಟ್ಟ ಬ್ಯಾಣ ಅಂದ್ರೆ ಅಷ್ಟಕಷ್ಟೇ 

ಬಂದಾಗ ಅದೂ ಇದೂ ಉಭಯ ಕುಶಲೋಪರಿ 

ಆಚಿಚೇ ಮನೆಗಳಿಗೆ ಹೀಗೆ ಹಲೋ  ಹಲೋ 

ಇಲ್ಲಾ ಅಂದ್ರೆ  ಮೊಬಾಯಿಲು ಮೂತಿ ತಿಕ್ಕೋದು 

ಅದಿಲ್ಲಾ ಮಳಕಂಡೆ ಚಡ್ಡಿಲೇ ಪ್ಯಾಟೆಗೆ ಹೋಪದು 


ಅದೇನಾತಪಅಂದ್ರೆ 

ತಿಂಗಳ  ಹಿಂದೆ   ಬಂದವ  ಆಸ್ರಿಗೆ ಕುಡದವನೇ 

ದಡ ದಡ ತೋಟದ ಕಡೆ ದೌಡಾಯಿಯಿಸಿದ

ವೀಳ್ಯದೆಲೆ ಬೆನ್ನಿನ ನಾರ ನಾಜೂಕಾಗಿ ಬಿಡಿಸಿ 

ದಪ್ಪಗೆ ಸುಣ್ಣ ಸವರ್ತಇದ್ದ  ಅಪ್ಪ ವಿಚಾರಕ್ಕೆ ಬಿದ್ದ 

ಅಥೋ, ಇದೆಂತಪ ಈ ಸರ್ತಿ ಈ ನಮ್ನಿ 

ಬಾಯಲ್ಲಿದ್ದದ್ದ ಫುರ್ರಗುಡ್ಸಿ ಮತ್ತೆ ಈಡು ತುಂಬಿ ಕುಂತ 


‘ಅಪ್ಪಯ್ಯ ತೋಟಎಲ್ಲಾ  ಸುತ್ತಾಕಿ ಬಂದಿ ಈಗ 

ಮಂಡಕಾದಗೆ  ಈಗಷ್ಟೆ ಒಣಗಿದ್ದು, ಆದ್ರೂ ತ್ವಾಟ ಹಸಿರಿದ್ದಾ 

ಮಂಡಗಟ್ಟು  ಹಾಕಿದ್ರೆ…’. ಅಷ್ಟು ಕೇಳಿದ್ದೇ

ಅಪ್ಪ ಆಕ್ಷಿ sssss ಅಂತ ಸೀನ ಹೊಡದ 

‘ಅದೇ… ಅದೇ.. ಆಕ್ಸಿಜನ್’  ಅಂದ   ಮಗ 

‘ತೋಟ ಅಂದ್ರೆ ಭಾರಿ ಖುಷಿ, ಪ್ರತಿ ಅಡಿಕೆ ಮರ 

ಅಷ್ಟು ಉದ್ದಕ್ಕೂ  ಆಕ್ಷಿಜನ ಸಿಲಿಂಡರ್ ಹಂಗೆಯ 

ಅದಕೇ  ಮತ್ತೆ ಅಪ್ಪಿಕೋ ಕಾಳು ಮೆಣಸು  

ಬಾಳೆ ತೆಂಗು ಕಾಫಿ ಕೋಕೋ ಹಾಂಗೇ 

ಶುಂಠಿ,  ಜಾಕಾಯಿ, ಲವಂಗ, ಅಲ್ಲೊಂದು 

ಇಲ್ಲೊಂದು  ಯಾಲಕ್ಕಿ ಹಿಂಡು, ಸೂಜಿಮೆಣಸು 

ಕಂಡದ್ದೇ ಎನ್ನತ್ರ , ಹಾ ಈಗ ಬಂದ್ಯಾ ಅಂದಹಾಂಗ್ ಆತು’


‘ಆರೋಗ್ಯ ಪೂರ್ಣಇಲ್ಲೇ ಇದ್ದು ನೋಡು 

ಈಗ  ಅದೇ ದೊಡ್ಡ ಭಾಗ್ಯ, ದುಡ್ದಲ್ಲಾ ಅಪ್ಪಯ್ಯ 

ಜೀವ ಒಂದಿದ್ರೆ ದುಡದು ಹ್ಯಾಂಗಾರೂ ಇರಲಕ್ಕು 

ಪ್ಯಾಟೆ, ಪಟ್ನ ಎಲ್ಲಾ ಕೆಟ್ಟು ಕಿಲಸಾರಾಗೋಜು 

ರಸ್ತೆ ವಾಹನ ಹೊಗೆ ಮನೆ ಜನದಟ್ಟನೇ 

ಹೊಲಸು, ಗಲೀಜು ಗಾಳಿ ನೀರು ಮಣ್ಣು 

 ಎಲ್ಲಿ ಹೋದ್ರೂ ಹೆದ್ರಿಕೆ  ವೈರಾಣು ರೋಗಾಣು 

ಆಸ್ಪತ್ರೆ ಲೆಕ್ಕದಲ್ಲಿ ಹೆಣಾ ಆದ್ರೂ  ಹಣವೇ ‘


ಅಲ್ಲೇ ಇದ್ದ ಮೊಮ್ಮಗ, ‘ಡ್ಯಾಡಿ, ನಂಗೆ 

ತೋಟ ಯಾವಾಗ ತೋರ್ಸತೆ’ ಎಂದದ್ದೇ 

‘ನಡೆ ಈಗ್ಲೇ’, ಅಪ್ಪ ಮಗ ಇಬ್ಬರೂ

ಸರ ಸರ  ತೋಟದ ದಾರಿ ಹಿಡದ 


 

ಕಾಲಚಕ್ರ ತಿರಗ್ತು ಹೇಳದು ಸುಳ್ಳಲ್ಲ 

ಆಗದೆಲ್ಲಾ ಒಳ್ಳೇದಕ್ಕೇ, ಅಪ್ಪ ಕಣ್ಣೊರೆಸಿಕೊಂಡ 

ಮನೆ ದೇವ್ರಿಗೆ ಕುಂತಲ್ಲೇ ಕೈ ಮುಗದ 

ಮತ್ತೊಂದ್ ವೀಳ್ಯದೆಲೆ ಬೆನ್ನ ನವಿರಾಗಿ ಸವರಿದ 



………..ರಾಜೀವ ಅಜ್ಜೀಬಳ 








ಅಡಿಕೆ ತೋಟ ಆಕ್ಸಿಜನ್ ಬಂಡಾರ -ಸುದ್ದಿ 

 ಸೊಕಾಗಿ ಹಿಂಗೇ ಒಂದು ಕವನ 


ಪ್ಯಾಟೆ, ಹಳ್ಳಿ, ಮನೆ, ಮಗ, ತ್ವಾಟ ಇತ್ಯಾದಿ 


ಹಾಂಗೆ ನೋಡಿದ್ರೆ ಆತ 

ಎಂದೂ ಆಕಡೆ ಮುಖ ಹಾಕಿದವನಲ್ಲ 

ತೋಟ ಗದ್ದೆ ಬೆಟ್ಟ ಬ್ಯಾಣ ಅಂದ್ರೆ ಅಷ್ಟಕಷ್ಟೇ 

ಬಂದಾಗ ಅದೂ ಇದೂ ಉಭಯ ಕುಶಲೋಪರಿ 

ಆಚಿಚೇ ಮನೆಗಳಿಗೆ ಹೀಗೆ ಹಲೋ  ಹಲೋ 

ಇಲ್ಲಾ ಅಂದ್ರೆ  ಮೊಬಾಯಿಲು ಮೂತಿ ತಿಕ್ಕೋದು 

ಅದಿಲ್ಲಾ ಮಳಕಂಡೆ ಚಡ್ಡಿಲೇ ಪ್ಯಾಟೆಗೆ ಹೋಪದು 


ಅದೇನಾತಪಅಂದ್ರೆ 

ತಿಂಗಳ  ಹಿಂದೆ   ಬಂದವ  ಆಸ್ರಿಗೆ ಕುಡದವನೇ 

ದಡ ದಡ ತೋಟದ ಕಡೆ ದೌಡಾಯಿಯಿಸಿದ

ವೀಳ್ಯದೆಲೆ ಬೆನ್ನಿನ ನಾರ ನಾಜೂಕಾಗಿ ಬಿಡಿಸಿ 

ದಪ್ಪಗೆ ಸುಣ್ಣ ಸವರ್ತಇದ್ದ  ಅಪ್ಪ ವಿಚಾರಕ್ಕೆ ಬಿದ್ದ 

ಅಥೋ, ಇದೆಂತಪ ಈ ಸರ್ತಿ ಈ ನಮ್ನಿ 

ಬಾಯಲ್ಲಿದ್ದದ್ದ ಫುರ್ರಗುಡ್ಸಿ ಮತ್ತೆ ಈಡು ತುಂಬಿ ಕುಂತ 


‘ಅಪ್ಪಯ್ಯ ತೋಟಎಲ್ಲಾ  ಸುತ್ತಾಕಿ ಬಂದಿ ಈಗ 

ಮಂಡಕಾದಗೆ  ಈಗಷ್ಟೆ ಒಣಗಿದ್ದು, ಆದ್ರೂ ತ್ವಾಟ ಹಸಿರಿದ್ದಾ 

ಮಂಡಗಟ್ಟು  ಹಾಕಿದ್ರೆ…’. ಅಷ್ಟು ಕೇಳಿದ್ದೇ

ಅಪ್ಪ ಆಕ್ಷಿ sssss ಅಂತ ಸೀನ ಹೊಡದ 

‘ಅದೇ… ಅದೇ.. ಆಕ್ಸಿಜನ್’  ಅಂದ   ಮಗ 

‘ತೋಟ ಅಂದ್ರೆ ಭಾರಿ ಖುಷಿ, ಪ್ರತಿ ಅಡಿಕೆ ಮರ 

ಅಷ್ಟು ಉದ್ದಕ್ಕೂ  ಆಕ್ಷಿಜನ ಸಿಲಿಂಡರ್ ಹಂಗೆಯ 

ಅದಕೇ  ಮತ್ತೆ ಅಪ್ಪಿಕೋ ಕಾಳು ಮೆಣಸು  

ಬಾಳೆ ತೆಂಗು ಕಾಫಿ ಕೋಕೋ ಹಾಂಗೇ 

ಶುಂಠಿ,  ಜಾಕಾಯಿ, ಲವಂಗ, ಅಲ್ಲೊಂದು 

ಇಲ್ಲೊಂದು  ಯಾಲಕ್ಕಿ ಹಿಂಡು, ಸೂಜಿಮೆಣಸು 

ಕಂಡದ್ದೇ ಎನ್ನತ್ರ , ಹಾ ಈಗ ಬಂದ್ಯಾ ಅಂದಹಾಂಗ್ ಆತು’


‘ಆರೋಗ್ಯ ಪೂರ್ಣಇಲ್ಲೇ ಇದ್ದು ನೋಡು 

ಈಗ  ಅದೇ ದೊಡ್ಡ ಭಾಗ್ಯ, ದುಡ್ದಲ್ಲಾ ಅಪ್ಪಯ್ಯ 

ಜೀವ ಒಂದಿದ್ರೆ ದುಡದು ಹ್ಯಾಂಗಾರೂ ಇರಲಕ್ಕು 

ಪ್ಯಾಟೆ, ಪಟ್ನ ಎಲ್ಲಾ ಕೆಟ್ಟು ಕಿಲಸಾರಾಗೋಜು 

ರಸ್ತೆ ವಾಹನ ಹೊಗೆ ಮನೆ ಜನದಟ್ಟನೇ 

ಹೊಲಸು, ಗಲೀಜು ಗಾಳಿ ನೀರು ಮಣ್ಣು 

 ಎಲ್ಲಿ ಹೋದ್ರೂ ಹೆದ್ರಿಕೆ  ವೈರಾಣು ರೋಗಾಣು 

ಆಸ್ಪತ್ರೆ ಲೆಕ್ಕದಲ್ಲಿ ಹೆಣಾ ಆದ್ರೂ  ಹಣವೇ ‘


ಅಲ್ಲೇ ಇದ್ದ ಮೊಮ್ಮಗ, ‘ಡ್ಯಾಡಿ, ನಂಗೆ 

ತೋಟ ಯಾವಾಗ ತೋರ್ಸತೆ’ ಎಂದದ್ದೇ 

‘ನಡೆ ಈಗ್ಲೇ’, ಅಪ್ಪ ಮಗ ಇಬ್ಬರೂ

ಸರ ಸರ  ತೋಟದ ದಾರಿ ಹಿಡದ 


 

ಕಾಲಚಕ್ರ ತಿರಗ್ತು ಹೇಳದು ಸುಳ್ಳಲ್ಲ 

ಆಗದೆಲ್ಲಾ ಒಳ್ಳೇದಕ್ಕೇ, ಅಪ್ಪ ಕಣ್ಣೊರೆಸಿಕೊಂಡ 

ಮನೆ ದೇವ್ರಿಗೆ ಕುಂತಲ್ಲೇ ಕೈ ಮುಗದ 

ಮತ್ತೊಂದ್ ವೀಳ್ಯದೆಲೆ ಬೆನ್ನ ನವಿರಾಗಿ ಸವರಿದ 



………..ರಾಜೀವ ಅಜ್ಜೀಬಳ 







ಅಡಿಕೆ ತೋಟ ಆಕ್ಸಿಜನ್ ಬಂಡಾರ -ಸುದ್ದಿ 

 ಸೊಕಾಗಿ ಹಿಂಗೇ ಒಂದು ಕವನ 


ಪ್ಯಾಟೆ, ಹಳ್ಳಿ, ಮನೆ, ಮಗ, ತ್ವಾಟ ಇತ್ಯಾದಿ 


ಹಾಂಗೆ ನೋಡಿದ್ರೆ ಆತ 

ಎಂದೂ ಆಕಡೆ ಮುಖ ಹಾಕಿದವನಲ್ಲ 

ತೋಟ ಗದ್ದೆ ಬೆಟ್ಟ ಬ್ಯಾಣ ಅಂದ್ರೆ ಅಷ್ಟಕಷ್ಟೇ 

ಬಂದಾಗ ಅದೂ ಇದೂ ಉಭಯ ಕುಶಲೋಪರಿ 

ಆಚಿಚೇ ಮನೆಗಳಿಗೆ ಹೀಗೆ ಹಲೋ  ಹಲೋ 

ಇಲ್ಲಾ ಅಂದ್ರೆ  ಮೊಬಾಯಿಲು ಮೂತಿ ತಿಕ್ಕೋದು 

ಅದಿಲ್ಲಾ ಮಳಕಂಡೆ ಚಡ್ಡಿಲೇ ಪ್ಯಾಟೆಗೆ ಹೋಪದು 


ಅದೇನಾತಪಅಂದ್ರೆ 

ತಿಂಗಳ  ಹಿಂದೆ   ಬಂದವ  ಆಸ್ರಿಗೆ ಕುಡದವನೇ 

ದಡ ದಡ ತೋಟದ ಕಡೆ ದೌಡಾಯಿಯಿಸಿದ

ವೀಳ್ಯದೆಲೆ ಬೆನ್ನಿನ ನಾರ ನಾಜೂಕಾಗಿ ಬಿಡಿಸಿ 

ದಪ್ಪಗೆ ಸುಣ್ಣ ಸವರ್ತಇದ್ದ  ಅಪ್ಪ ವಿಚಾರಕ್ಕೆ ಬಿದ್ದ 

ಅಥೋ, ಇದೆಂತಪ ಈ ಸರ್ತಿ ಈ ನಮ್ನಿ 

ಬಾಯಲ್ಲಿದ್ದದ್ದ ಫುರ್ರಗುಡ್ಸಿ ಮತ್ತೆ ಈಡು ತುಂಬಿ ಕುಂತ 


‘ಅಪ್ಪಯ್ಯ ತೋಟಎಲ್ಲಾ  ಸುತ್ತಾಕಿ ಬಂದಿ ಈಗ 

ಮಂಡಕಾದಗೆ  ಈಗಷ್ಟೆ ಒಣಗಿದ್ದು, ಆದ್ರೂ ತ್ವಾಟ ಹಸಿರಿದ್ದಾ 

ಮಂಡಗಟ್ಟು  ಹಾಕಿದ್ರೆ…’. ಅಷ್ಟು ಕೇಳಿದ್ದೇ

ಅಪ್ಪ ಆಕ್ಷಿ sssss ಅಂತ ಸೀನ ಹೊಡದ 

‘ಅದೇ… ಅದೇ.. ಆಕ್ಸಿಜನ್’  ಅಂದ   ಮಗ 

‘ತೋಟ ಅಂದ್ರೆ ಭಾರಿ ಖುಷಿ, ಪ್ರತಿ ಅಡಿಕೆ ಮರ 

ಅಷ್ಟು ಉದ್ದಕ್ಕೂ  ಆಕ್ಷಿಜನ ಸಿಲಿಂಡರ್ ಹಂಗೆಯ 

ಅದಕೇ  ಮತ್ತೆ ಅಪ್ಪಿಕೋ ಕಾಳು ಮೆಣಸು  

ಬಾಳೆ ತೆಂಗು ಕಾಫಿ ಕೋಕೋ ಹಾಂಗೇ 

ಶುಂಠಿ,  ಜಾಕಾಯಿ, ಲವಂಗ, ಅಲ್ಲೊಂದು 

ಇಲ್ಲೊಂದು  ಯಾಲಕ್ಕಿ ಹಿಂಡು, ಸೂಜಿಮೆಣಸು 

ಕಂಡದ್ದೇ ಎನ್ನತ್ರ , ಹಾ ಈಗ ಬಂದ್ಯಾ ಅಂದಹಾಂಗ್ ಆತು’


‘ಆರೋಗ್ಯ ಪೂರ್ಣಇಲ್ಲೇ ಇದ್ದು ನೋಡು 

ಈಗ  ಅದೇ ದೊಡ್ಡ ಭಾಗ್ಯ, ದುಡ್ದಲ್ಲಾ ಅಪ್ಪಯ್ಯ 

ಜೀವ ಒಂದಿದ್ರೆ ದುಡದು ಹ್ಯಾಂಗಾರೂ ಇರಲಕ್ಕು 

ಪ್ಯಾಟೆ, ಪಟ್ನ ಎಲ್ಲಾ ಕೆಟ್ಟು ಕಿಲಸಾರಾಗೋಜು 

ರಸ್ತೆ ವಾಹನ ಹೊಗೆ ಮನೆ ಜನದಟ್ಟನೇ 

ಹೊಲಸು, ಗಲೀಜು ಗಾಳಿ ನೀರು ಮಣ್ಣು 

 ಎಲ್ಲಿ ಹೋದ್ರೂ ಹೆದ್ರಿಕೆ  ವೈರಾಣು ರೋಗಾಣು 

ಆಸ್ಪತ್ರೆ ಲೆಕ್ಕದಲ್ಲಿ ಹೆಣಾ ಆದ್ರೂ  ಹಣವೇ ‘


ಅಲ್ಲೇ ಇದ್ದ ಮೊಮ್ಮಗ, ‘ಡ್ಯಾಡಿ, ನಂಗೆ 

ತೋಟ ಯಾವಾಗ ತೋರ್ಸತೆ’ ಎಂದದ್ದೇ 

‘ನಡೆ ಈಗ್ಲೇ’, ಅಪ್ಪ ಮಗ ಇಬ್ಬರೂ

ಸರ ಸರ  ತೋಟದ ದಾರಿ ಹಿಡದ 


 

ಕಾಲಚಕ್ರ ತಿರಗ್ತು ಹೇಳದು ಸುಳ್ಳಲ್ಲ 

ಆಗದೆಲ್ಲಾ ಒಳ್ಳೇದಕ್ಕೇ, ಅಪ್ಪ ಕಣ್ಣೊರೆಸಿಕೊಂಡ 

ಮನೆ ದೇವ್ರಿಗೆ ಕುಂತಲ್ಲೇ ಕೈ ಮುಗದ 

ಮತ್ತೊಂದ್ ವೀಳ್ಯದೆಲೆ ಬೆನ್ನ ನವಿರಾಗಿ ಸವರಿದ 



………..ರಾಜೀವ ಅಜ್ಜೀಬಳ 





































Comments

Popular posts from this blog

ವಿನಾಶ ಕಾಲೇ

Message to love in nature