ವಿನಾಶ ಕಾಲೇ

 


ವಿನಾಶಕಾಲೇ  ಯುದ್ಧಾವೇಶ

1

 ವಿಷ  ಕಕ್ಕುವ  ಡ್ರಾಗನ್ನು ಅದು 

ಮೊದಲು ಗುಮ್ಮಿತು  ಮಾರಕ ವೈರಾಣು 

ಬಳಿಕ  ಕೆಂಪು ತುಕಡಿ ಕಾಲ್ಕೆದರಿ ಕಿರಿಕಿರಿ 

ದ್ವೇಷ, ಮೋಸ,   ತೀರದ ಭೂದಾಹ 

ಯುದ್ಧ ವ್ಯಾಧಿ ಪೀಡಿತ, ಜನಭಾರ ದೇಶ 

ಹುಟ್ಟಾ ಕಲಹ ನಿಪುಣ ನೇತಾರರು 

ಇಲ್ಲಿ ಮಾತುಕತೆ, ಅಲ್ಲಿ ಕುಸ್ತಿ ಮಸ್ತಿ ಬೆನ್ನಿಗೆ ಚೂರಿ 

ಹಿಮ ಹೊತ್ತಿ ಉರಿವ ಉತ್ತರಾOಚಲ

ಅವರ ಕಪಟ  ಸ್ನೇಹ ನಂಬಿ ಕೆಟ್ಟವರು ನಾವು 

 ಗಡಿ ರಕ್ಷಣೆ ನಮಗನಿವಾರ್ಯ ಕರ್ಮ 

ಶಾಂತಿಗೆ ಶಾಂತಿ, ಯುದ್ಧಕ್ಕೆ  ಉತ್ತರ ಯುದ್ಧ 

ಆಯ್ಕೆ ಅವರದು, ಯಾವುದಕ್ಕೂ ನಾವು ಸಿದ್ಧ 

2

ಯುದ್ಧದ ಸುದ್ದಿ ರೋಚಕ 

ನೋಡಲು, ಕೇಳಲು, ಹೇಳಲು 

ಏನು ನಡೆದರೂ ಅಲ್ಲಿ ಸರಿಯೇ? 

ಬೇಕೇ ಹಿಂಸೆ, ಸಾವಿನ ಸರಣಿ ಹತ್ಯಾಕಾಂಡ 

ವೀರ ಸ್ವರ್ಗ, ವೀರ ಮರಣ, ಹುತಾತ್ಮ ಪಟ್ಟ? 

3

ಯುದ್ಧ ಕೊಲ್ಲುವುದು ಬಿಸಿರಕ್ತದ ಕನಸುಗಳ  

ನಾಡಿನ ಭವಿಷ್ಯದ  ಜೀವ ಧಾತುಗಳ

   ಆಜೀವ  ಶೋಕತಪ್ತ ಹೆತ್ತು ಹೊತ್ತವರ

 ಕಣ್ಣೀರು ಕುಡಿವ ಮಡದಿ ಮಕ್ಕಳ 

ಜನ ಮನಸು ಬದುಕು ಆಸೆ ಆಕಾಂಕ್ಷೆಗಳ 

ಮುದ್ದು ಚಿಣ್ಣರ  ಚೆಂದದ ನಾಳೆಗಳ 

ನೆಮ್ಮದಿ ಶಾಂತಿ ಸಹಜ ಜೀವನವ 

4

ಯುದ್ಧಸ್ಯ ವಾರ್ತಾ ರಮ್ಯ 

ಪರಿಣಾಮ ಘೋರ,  ಭೀಕರ 

ಸಾವು, ನೋವು ವಿಕಲಾಂಗ 

ರಕ್ತಪಾತ, ವಿನಾಶ, ಮಾಲಿನ್ಯ 

ರೋಗ ರುಜಿನ,ಹತಾಶೆ, ದಾರಿದ್ರ್ಯ 

ಅಸ್ತವ್ಯಸ್ತ, ಬದುಕು   ಮೂರಾಬಟ್ಟೆ 

ಮಾನವತೆಯ ದುರಂತ ಪರ್ವ 

ಇತಿಹಾಸದ ಶಾಶ್ವತ ಕರಾಳ ಪುಟ 

5

 ಯುದ್ಧ ಯುಗ ಮುಗಿದು ಹೋಗಲಿ 

ಯುದ್ಧ ಉನ್ಮಾದಿಗಳ ಅಂತ್ಯವಾಗಲಿ 

ಸಮರ ವಾಹನಗಳು, ಕ್ಷಿಪಣಿಗಳು

 ಇದ್ದಲ್ಲೇ ಬಂಡೆ ಶಿಖರಗಳಾಗಲಿ

ಮೊದಲಿಗಲ್ಲಿ ಹೊಂಬೆಳಕು ಬೀಳಲಿ 

ಹೂ ಹಣ್ಣುಗಿಡಗಳಾಗಲಿ ರೈಫಲ್ಲುಗಳು 

 ಗೊಬ್ಬರವಾಗಲಿ ಸಿಡಿ ಮದ್ದು ಗುಂಡುಗಳು 

ಸಾವಿರ  ಮೀನುಗಳಾಗಿ ಈಜಲಿ ಹಡಗುಗಳು 

ಬಣ್ಣದ   ಗಾಳಿಪಟಗಳಾಗಲಿ  ವಿಮಾನಗಳು 

ಇದ್ದಲ್ಲೇ ವರಲೆಹತ್ತಿ ಮಣ್ಣಾಗಿಹೋಗಲಿ 

ಭಯಂಕರ ಅಣು ಅಸ್ತ್ರಗಳು 

  ಮನುಕುಲ ನವ ಮನ್ವOತರ ಕಾಣಲಿ 


……..ರಾಜೀವ ಅಜ್ಜೀಬಳ 

ಮುಕ್ಕಾಂ &ಅಂಚೆ -ಅಜ್ಜೀಬಳ 

ತಾಲೂಕು -ಶಿರಸಿ (ಉತ್ತರ ಕನ್ನಡ )

581340

ಇಮೇಲ್ -rjv666@gmail., com 



.








 ಸಂಪಾದಕರು,  ‘ತುಷಾರ ‘ಮಾಸಿಕ 

ಬಳಿಗೆ ಪ್ರಕಟನೆ ಕೋರಿ 


ವಿನಾಶಕಾಲೇ  ಯುದ್ಧಾವೇಶ

1

 ವಿಷ  ಕಕ್ಕುವ  ಡ್ರಾಗನ್ನು ಅದು 

ಮೊದಲು ಗುಮ್ಮಿತು  ಮಾರಕ ವೈರಾಣು 

ಬಳಿಕ  ಕೆಂಪು ತುಕಡಿ ಕಾಲ್ಕೆದರಿ ಕಿರಿಕಿರಿ 

ದ್ವೇಷ, ಮೋಸ,   ತೀರದ ಭೂದಾಹ 

ಯುದ್ಧ ವ್ಯಾಧಿ ಪೀಡಿತ, ಜನಭಾರ ದೇಶ 

ಹುಟ್ಟಾ ಕಲಹ ನಿಪುಣ ನೇತಾರರು 

ಇಲ್ಲಿ ಮಾತುಕತೆ, ಅಲ್ಲಿ ಕುಸ್ತಿ ಮಸ್ತಿ ಬೆನ್ನಿಗೆ ಚೂರಿ 

ಹಿಮ ಹೊತ್ತಿ ಉರಿವ ಉತ್ತರಾOಚಲ

ಅವರ ಕಪಟ  ಸ್ನೇಹ ನಂಬಿ ಕೆಟ್ಟವರು ನಾವು 

 ಗಡಿ ರಕ್ಷಣೆ ನಮಗನಿವಾರ್ಯ ಕರ್ಮ 

ಶಾಂತಿಗೆ ಶಾಂತಿ, ಯುದ್ಧಕ್ಕೆ  ಉತ್ತರ ಯುದ್ಧ 

ಆಯ್ಕೆ ಅವರದು, ಯಾವುದಕ್ಕೂ ನಾವು ಸಿದ್ಧ 

2

ಯುದ್ಧದ ಸುದ್ದಿ ರೋಚಕ 

ನೋಡಲು, ಕೇಳಲು, ಹೇಳಲು 

ಏನು ನಡೆದರೂ ಅಲ್ಲಿ ಸರಿಯೇ? 

ಬೇಕೇ ಹಿಂಸೆ, ಸಾವಿನ ಸರಣಿ ಹತ್ಯಾಕಾಂಡ 

ವೀರ ಸ್ವರ್ಗ, ವೀರ ಮರಣ, ಹುತಾತ್ಮ ಪಟ್ಟ? 

3

ಯುದ್ಧ ಕೊಲ್ಲುವುದು ಬಿಸಿರಕ್ತದ ಕನಸುಗಳ  

ನಾಡಿನ ಭವಿಷ್ಯದ  ಜೀವ ಧಾತುಗಳ

   ಆಜೀವ  ಶೋಕತಪ್ತ ಹೆತ್ತು ಹೊತ್ತವರ

 ಕಣ್ಣೀರು ಕುಡಿವ ಮಡದಿ ಮಕ್ಕಳ 

ಜನ ಮನಸು ಬದುಕು ಆಸೆ ಆಕಾಂಕ್ಷೆಗಳ 

ಮುದ್ದು ಚಿಣ್ಣರ  ಚೆಂದದ ನಾಳೆಗಳ 

ನೆಮ್ಮದಿ ಶಾಂತಿ ಸಹಜ ಜೀವನವ 

4

ಯುದ್ಧಸ್ಯ ವಾರ್ತಾ ರಮ್ಯ 

ಪರಿಣಾಮ ಘೋರ,  ಭೀಕರ 

ಸಾವು, ನೋವು ವಿಕಲಾಂಗ 

ರಕ್ತಪಾತ, ವಿನಾಶ, ಮಾಲಿನ್ಯ 

ರೋಗ ರುಜಿನ,ಹತಾಶೆ, ದಾರಿದ್ರ್ಯ 

ಅಸ್ತವ್ಯಸ್ತ, ಬದುಕು   ಮೂರಾಬಟ್ಟೆ 

ಮಾನವತೆಯ ದುರಂತ ಪರ್ವ 

ಇತಿಹಾಸದ ಶಾಶ್ವತ ಕರಾಳ ಪುಟ 

5

 ಯುದ್ಧ ಯುಗ ಮುಗಿದು ಹೋಗಲಿ 

ಯುದ್ಧ ಉನ್ಮಾದಿಗಳ ಅಂತ್ಯವಾಗಲಿ 

ಸಮರ ವಾಹನಗಳು, ಕ್ಷಿಪಣಿಗಳು

 ಇದ್ದಲ್ಲೇ ಬಂಡೆ ಶಿಖರಗಳಾಗಲಿ

ಮೊದಲಿಗಲ್ಲಿ ಹೊಂಬೆಳಕು ಬೀಳಲಿ 

ಹೂ ಹಣ್ಣುಗಿಡಗಳಾಗಲಿ ರೈಫಲ್ಲುಗಳು 

 ಗೊಬ್ಬರವಾಗಲಿ ಸಿಡಿ ಮದ್ದು ಗುಂಡುಗಳು 

ಸಾವಿರ  ಮೀನುಗಳಾಗಿ ಈಜಲಿ ಹಡಗುಗಳು 

ಬಣ್ಣದ   ಗಾಳಿಪಟಗಳಾಗಲಿ  ವಿಮಾನಗಳು 

ಇದ್ದಲ್ಲೇ ವರಲೆಹತ್ತಿ ಮಣ್ಣಾಗಿಹೋಗಲಿ 

ಭಯಂಕರ ಅಣು ಅಸ್ತ್ರಗಳು 

  ಮನುಕುಲ ನವ ಮನ್ವOತರ ಕಾಣಲಿ 


……..ರಾಜೀವ ಅಜ್ಜೀಬಳ 

ಮುಕ್ಕಾಂ &ಅಂಚೆ -ಅಜ್ಜೀಬಳ 

ತಾಲೂಕು -ಶಿರಸಿ (ಉತ್ತರ ಕನ್ನಡ )

581340

ಇಮೇಲ್ -rjv666@gmail., com 



.







ಸಂಪಾದಕರು,  ‘ತುಷಾರ ‘ಮಾಸಿಕ 

ಬಳಿಗೆ ಪ್ರಕಟನೆ ಕೋರಿ 


ವಿನಾಶಕಾಲೇ  ಯುದ್ಧಾವೇಶ

1

 ವಿಷ  ಕಕ್ಕುವ  ಡ್ರಾಗನ್ನು ಅದು 

ಮೊದಲು ಗುಮ್ಮಿತು  ಮಾರಕ ವೈರಾಣು 

ಬಳಿಕ  ಕೆಂಪು ತುಕಡಿ ಕಾಲ್ಕೆದರಿ ಕಿರಿಕಿರಿ 

ದ್ವೇಷ, ಮೋಸ,   ತೀರದ ಭೂದಾಹ 

ಯುದ್ಧ ವ್ಯಾಧಿ ಪೀಡಿತ, ಜನಭಾರ ದೇಶ 

ಹುಟ್ಟಾ ಕಲಹ ನಿಪುಣ ನೇತಾರರು 

ಇಲ್ಲಿ ಮಾತುಕತೆ, ಅಲ್ಲಿ ಕುಸ್ತಿ ಮಸ್ತಿ ಬೆನ್ನಿಗೆ ಚೂರಿ 

ಹಿಮ ಹೊತ್ತಿ ಉರಿವ ಉತ್ತರಾOಚಲ

ಅವರ ಕಪಟ  ಸ್ನೇಹ ನಂಬಿ ಕೆಟ್ಟವರು ನಾವು 

 ಗಡಿ ರಕ್ಷಣೆ ನಮಗನಿವಾರ್ಯ ಕರ್ಮ 

ಶಾಂತಿಗೆ ಶಾಂತಿ, ಯುದ್ಧಕ್ಕೆ  ಉತ್ತರ ಯುದ್ಧ 

ಆಯ್ಕೆ ಅವರದು, ಯಾವುದಕ್ಕೂ ನಾವು ಸಿದ್ಧ 

2

ಯುದ್ಧದ ಸುದ್ದಿ ರೋಚಕ 

ನೋಡಲು, ಕೇಳಲು, ಹೇಳಲು 

ಏನು ನಡೆದರೂ ಅಲ್ಲಿ ಸರಿಯೇ? 

ಬೇಕೇ ಹಿಂಸೆ, ಸಾವಿನ ಸರಣಿ ಹತ್ಯಾಕಾಂಡ 

ವೀರ ಸ್ವರ್ಗ, ವೀರ ಮರಣ, ಹುತಾತ್ಮ ಪಟ್ಟ? 

3

ಯುದ್ಧ ಕೊಲ್ಲುವುದು ಬಿಸಿರಕ್ತದ ಕನಸುಗಳ  

ನಾಡಿನ ಭವಿಷ್ಯದ  ಜೀವ ಧಾತುಗಳ

   ಆಜೀವ  ಶೋಕತಪ್ತ ಹೆತ್ತು ಹೊತ್ತವರ

 ಕಣ್ಣೀರು ಕುಡಿವ ಮಡದಿ ಮಕ್ಕಳ 

ಜನ ಮನಸು ಬದುಕು ಆಸೆ ಆಕಾಂಕ್ಷೆಗಳ 

ಮುದ್ದು ಚಿಣ್ಣರ  ಚೆಂದದ ನಾಳೆಗಳ 

ನೆಮ್ಮದಿ ಶಾಂತಿ ಸಹಜ ಜೀವನವ 

4

ಯುದ್ಧಸ್ಯ ವಾರ್ತಾ ರಮ್ಯ 

ಪರಿಣಾಮ ಘೋರ,  ಭೀಕರ 

ಸಾವು, ನೋವು ವಿಕಲಾಂಗ 

ರಕ್ತಪಾತ, ವಿನಾಶ, ಮಾಲಿನ್ಯ 

ರೋಗ ರುಜಿನ,ಹತಾಶೆ, ದಾರಿದ್ರ್ಯ 

ಅಸ್ತವ್ಯಸ್ತ, ಬದುಕು   ಮೂರಾಬಟ್ಟೆ 

ಮಾನವತೆಯ ದುರಂತ ಪರ್ವ 

ಇತಿಹಾಸದ ಶಾಶ್ವತ ಕರಾಳ ಪುಟ 

5

 ಯುದ್ಧ ಯುಗ ಮುಗಿದು ಹೋಗಲಿ 

ಯುದ್ಧ ಉನ್ಮಾದಿಗಳ ಅಂತ್ಯವಾಗಲಿ 

ಸಮರ ವಾಹನಗಳು, ಕ್ಷಿಪಣಿಗಳು

 ಇದ್ದಲ್ಲೇ ಬಂಡೆ ಶಿಖರಗಳಾಗಲಿ

ಮೊದಲಿಗಲ್ಲಿ ಹೊಂಬೆಳಕು ಬೀಳಲಿ 

ಹೂ ಹಣ್ಣುಗಿಡಗಳಾಗಲಿ ರೈಫಲ್ಲುಗಳು 

 ಗೊಬ್ಬರವಾಗಲಿ ಸಿಡಿ ಮದ್ದು ಗುಂಡುಗಳು 

ಸಾವಿರ  ಮೀನುಗಳಾಗಿ ಈಜಲಿ ಹಡಗುಗಳು 

ಬಣ್ಣದ   ಗಾಳಿಪಟಗಳಾಗಲಿ  ವಿಮಾನಗಳು 

ಇದ್ದಲ್ಲೇ ವರಲೆಹತ್ತಿ ಮಣ್ಣಾಗಿಹೋಗಲಿ 

ಭಯಂಕರ ಅಣು ಅಸ್ತ್ರಗಳು 

  ಮನುಕುಲ ನವ ಮನ್ವOತರ ಕಾಣಲಿ 


……..ರಾಜೀವ ಅಜ್ಜೀಬಳ 

ಮುಕ್ಕಾಂ &ಅಂಚೆ -ಅಜ್ಜೀಬಳ 

ತಾಲೂಕು -ಶಿರಸಿ (ಉತ್ತರ ಕನ್ನಡ )

581340

ಇಮೇಲ್ -rjv666@gmail., com 



.








 



.






 



.








.






Comments

Popular posts from this blog

Message to love in nature