ಬೆಳಕಿನ ಹಬ್ಬ ದೀಪಾವಳಿ ಸಂದರ್ಭಕ್ಕೆ ಈ ಕವನ

ಹಚ್ಚೋಣ ದೀಪ ಬನ್ನಿ
ಹಚ್ಚೋಣ ದೀಪ ಬನ್ನಿ
ಸಂತಸದ ಬೆಳಕ ತನ್ನಿ

ಮನೆ ಮನೆಗಳಲಿ
 ನಲಿವಿನಾ ದೀಪ
ಮನ ಮನಗಳಲಿ
 ಅರಿವಿನಾ ದೀಪ

ಅಜ್ಞಾನ ತೊಲಗಿಸುವ
 ಸುಜ್ಞಾನ ದೀಪ
ಮಲಿನತೆಯ ನೀಗುವಾ
 ನಿರ್ಮಲ ದೀಪ

 ಹಿಂಸೆಯಾ ತೊರೆವ
 ಕರುಣೆಯಾ ದೀಪ
ಬಾಂಧವ್ಯ ಬೆಸೆಯುವಾ
 ಒಲವಿನಾ ದೀಪ

ಬೇಧ ಭಾವಗಳಿರದ
ಸಮರಸ ದೀಪ
ದಿಕ್ಕೆಟ್ಟ ನಡೆನುಡಿಗೆ
 ಸನ್ಮಾರ್ಗ ದೀಪ

******ರಾಜೀವ ಅಜ್ಜೀಬಳ

Comments

Popular posts from this blog

ವಿನಾಶ ಕಾಲೇ

Message to love in nature