ಇದೀಗ ನಮ್ಮಲ್ಲಿ ಇಡೀ ದಿನ ಮಳೆ ಸೊಬಗು. 


ಮುಂಗಾರಿನ ಹನಿಗಳು 


ಕಿವಿ ಬಿರಿವ ಡೋಲು, ಕೋಲು 

ಮಿಂಚು ಏನಾಗಿದೆ ಬಾನಿಗೆ? 

ಅದು ಮೆರವಣಿಗೆ, ಕರೆತರಲು 

ಮುಂಗಾರನು ಮೇದಿನಿಗೆ 


****-

ಭೋರ್ಗರೆಯಿತು ಬಿರುಗಾಳಿ ಮಳೆ 

ತಿಕ್ಕಾಡಿದವು ಗಿಡ ಮರಗಳು 

ಭುವಿಯ ಸಂಧಿಗೊಂದಿಗಳಿಂದ 

ದಿಗ್ಗನೇ ಕಣ್ತೆರೆದವು ತೊರೆಗಳು 

****

ಧಾರೆಮಳೆಗೂ ಉಂಟು 

ಸುರ ಲಯ ಸಿಂಗಾರ 

ಕೇಳು,  ಆಲಿಸಿದರದು

ರಾಗ  ಮೇಘಮಲ್ಹಾರ 


****

ಯಾರೆಂದರು ಮಳೆಯೆಂದರೆ

 ಮುಸಿ ಮುಸಿ ಅಳುವೆಂದು? 

ಕಾದು ಕಂಗೆಟ್ಟ ನೆಲದೊಡಲಿಗದು 

ಮುಗಿಲು ಸುರಿವ ಅಮೃತ ಬಿಂದು 


****


ಸುರಿದಾಗ ಮೊದಲ ಮಳೆ 

ನಿರುಕಿಸಿದೆ ಎಲ್ಲೆಡೆಗೆ 

ಕಮ್ಮನೆ ನುಗ್ಗಿತು ಮಣ್ಣ ಪರಿಮಳ 

ಹೊಸ ಹಸಿರು ಹೂ ಕವನ 


****

ರಾಜೀವ ಅಜ್ಜೀಬಳ

Comments

Popular posts from this blog

ವಿನಾಶ ಕಾಲೇ

Message to love in nature