ಎಲ್ಲಿಯದೋ ಗಂಡು, ಎಲ್ಲಿಯದೋ ಹೆಣ್ಣು
ಕೂಡಿ ನಡೆವ ದಾಂಪತ್ಯದ ಪರಿ ಅಚ್ಚರಿ
ಒಂದು ದಾಂಪತ್ಯ ಗೀತೆ
ಅನುಬಂಧ
ನಾನೆಲ್ಲಿಯೋ ನೀನೆಲ್ಲಿಯೋ
ಹೇಗೆ ಬಂದೆವಿಲ್ಲಿಗೆ?
ಜೀವ ಹಿಗ್ಗಿ ಅರಳಿದೆ
ನಡೆವ ದಾರಿ ಎಲ್ಲಿಗೆ?
ನನ್ನ ನಿನ್ನದೆಯ ಧ್ವನಿಗೆ
ಸಾನುರಾಗ ಸೊಗಸಿದೆ
ಕಣ್ಣ ಭಾಷೆ ಕವನಕೆ
ತುಟಿಯುಲಿತದ ಶೃತಿಯಿದೆ
ಮಾತಿಗೆನಿತು ಪದವಿಹುದು
ನೋಟವೇ ಪ್ರಿಯವೆನಿಸಿದೆ
ಯಾವುದೋ ರಸಗಾನ ಲಹರಿ
ನಮ್ಮ ನಡುವೆ ಹರಿದಿದೆ
ನಾನೆಲ್ಲಿಯೋ ನೀನೆಲ್ಲಿಯೋ
ಏಕೆ ಬಂದೆವಿಲ್ಲಿಗೆ?
ಯಾವ ಪೂರ್ವಾನುಬಂಧ
ನಮ್ಮ ತಂದಿತಿಲ್ಲಿಗೆ?
..... ರಾಜೀವ ಅಜ್ಜಿಬಳ
Comments
Post a Comment