ವಿಶ್ವ ಮಹಿಳಾ ದಿನಾಚರಣೆಯ ದಿನದ ಸಂದರ್ಭಕ್ಕೆ ಈ ಕವನ
ವ್ಯಾಪ್ತಿ
ಯಾವ ನೆಲದ ಹಸಿರು ನೀನು
ಯಾವ ವನದ ಹೂವು?
ಯಾವ ಮಣ್ಣ ಗಂಧ ನೀನು
ಯಾವ ಗುಡಿಯ ಸೊಡರು?
ಯಾವ ಕವಿಯ ಕಾವ್ಯ ನೀನು
ಯಾವ ಮಧುರ ಹಾಡು?
ಯಾವ ನದಿಯ ಲಾಸ್ಯ ನೀನು
ಯಾವ ಕಡಲ ಬೆಡಗು?
ಯಾವ ನಾಡ ಪುಣ್ಯ ನೀನು
ಯಾವ ಕುಲದ ಹೆಸರು?
ಯಾವ ಬಾನ ಹರಹು ನೀನು
ಯಾವ ದಿವ್ಯ ಪ್ರಭೆಯು?
......ರಾಜೀವ ಅಜ್ಜೀಬಳ
Comments
Post a Comment