ಬನವಾಸಿ ಕದಂಬಪಂಫೋತ್ಸವ ಸಂದರ್ಭಕ್ಕೆ 


ನೆನೆ ನೆನೆದು ಬನವಾಸಿ ಬರೆದ ಭಾರತವ 


ಕಲಿಯಾಗಿ ಬಂದ, ಮಹಾಕವಿಯಾಗಿ ಬೆಳೆದ  

ಆದಿ ಕವಿ ಪಂಪ, ಎರೆದ ನೆಲ ನುಡಿಗೆ ಕಂಪ 


ಮಾoದರಿಳ ಸೊoಪಿನಲಿ, ಕೋಗಿಲೆಗಳಿಂಪಿನಲಿ 

ದುಂಬಿಗಳ ಕಲರವ, ಹೂತ ಮರ ಮರಗಳಲಿ  


ಬನವಸೆಯ   ವನಸಿರಿಗೆ  ಮನಸೋತ ಕಲಿ ಪಂಪ 

ಅಂಕುಶವ ತೊರೆದನವ, ಹಿಡಿದ ಲೇಖನಿಯ 


ಪ್ರಕೃತಿ ಸಿರಿ ಸೊಬಗಿನಲಿ ದಿವ್ಯಾನುಭೂತಿಯಲಿ 

ನವ ಭಾವ ಅಂಕುರಿಸಿ, ಮೆರೆದ  ಕವಿ ಜೀವಿ 


ರಣರಂಗದಿಂದಾತ  ಅಂತರಂಗಕೆ ನಡೆದ 

ಅರುಹಂತ  ಪಂಪ, ಕನ್ನುಡಿಗಿಟ್ಟ ಮುಕುಟ


ಮಾನವ ಕುಲ ತಾನೊಂದೆ ವಲಂ ಎಂದ 

ನೋವು ಯಾತನೆ ಕದನ ಸಲ್ಲದೆಂದ


ಹುಟ್ಟಿದರೆ ಮತ್ತೊಮ್ಮೆ ಬನವಾಸಿಯಲ್ಲೆoದ     

ಮರಿ ದುಂಬಿ ಯಾ ಕೋಗಿಲೆಯಾಗಿರುವೆನೆಂದ


 ಜಯಂತಿಯ ನೆಲದಲಿ ವರದೆ ಯ ತೀರದಲಿ 

ಮಧುಕೇಶನನುಭೂತಿ  ಭಕ್ತಿ  ಭಾವದಲಿ      


ಚೂತ ವನ ಚಿಗುರಿನಲಿ ಪಂಪ ಪಾವನನಾದ 

ನೆನೆ ನೆನೆದು ಬನವಾಸಿ ಬರೆದ ಭಾರತವ 


.......ರಾಜೀವ  ಅಜ್ಜೀಬಳ

Comments

Popular posts from this blog

ವಿನಾಶ ಕಾಲೇ

Message to love in nature