ಅನುದಿನದ ಗುನುಗು 


ಒಂದು ಪುಟ್ಟ   ದಾಂಪತ್ಯ ಗೀತೆ 


ನೀ -ನಾ 


ನೀನು ಹೂವು ನಾನು ಭ್ರOಗ 

ಬಾಳು ಮಕರಂದ 


ನೀನು ರಾಗ ನಾನು ತಾಳ    

ಬಾಳು ಸಾನುರಾಗ 


ನೀನು ಗಾನ ನಾನು ಕವನ 

ಬಾಳು ವಿಕಸಿತವನ 


ನೀನು ಹಕ್ಕಿ ನಾನು ಗೂಡು 

ಬಾಳು ಉದಯಗಾನ 


ನೀನು ಭೂಮಿ ನಾನು ಭಾನು 

ಬಾಳು ರಮ್ಯ ಕಿರಣ 


ನೀನು ಜೀವ ನಾನು ಭಾವ 

ಬಾಳು ದಿವ್ಯ ಬಂಧನ 


ನೀನು ಪ್ರಕೃತಿ ನಾನು ಪುರುಷ 

ಆತ್ಮ ಅಮರ ಜ್ಯೋತಿ 


....... ರಾಜೀವ ಅಜ್ಜೀಬಳ

Comments

Popular posts from this blog

ವಿನಾಶ ಕಾಲೇ

Message to love in nature