ನಿಮ್ಮ ಗಮನಕ್ಕೆ ಇಂತವರು ಬಂದಿರುತ್ತಾರೆ ಆಗೀಗ ಅಲ್ಲವೇ?
ಸ್ವಾನಂದ ಟೀಕಾನಂದರು
ಏತಿ ಎಂದರೆ ನೇತಿ ಎನ್ನುವರು
ಹಾಗೆಂದರೆ ಹೀಗೇ ಎನ್ನುವರು
ತಲೆ ಎಂದರೆ ಕಾಲೆಳೆವರು
ಕೊಡಿ ಎಂದರೆ ಕೈಕೊಡುವರು
ಸ್ವಾನಂದ ಟೀಕಾನಂದರು
ಬೆಳಕೆoದರೆ ಬೆಂಕಿಯಾಗುವರು
ಉರಿಎಂದು ಉರಿದು ಬೀಳುವರು
ಪಾಪಿಗಳಿಗೆ ಪಾಪ ಎನುವರು
ಉದ್ದಟರನು ಮುಗ್ಧರೆನುವರು
ಸ್ವಾನಂದ ಟೀಕಾನಂದರು
ಶತಮೂರ್ಖರನು ಎತ್ತಿ ಹೊಗಳುವರು
ಮುಟ್ಟಾಳ ರಿಗೆ ಬೆನ್ನು ತಟ್ಟುವರು
ಹೇಳಿದ್ದೇ ಸರಿ ವಾದಿಸುವರು
ಕೇಡು ನುಡಿಗಳ ವಾರಸುದಾರರು
ಸ್ವಾನಂದ ಟೀಕಾನಂದರು
ಹೂಗಳೆOದರೆ ಮುಳ್ಳೇ ಎನ್ನುವರು
ಅಕ್ಷರವೆಲ್ಲ ಅಲಗೆನ್ನುವರು
ಮುನ್ನಡೆಎಂದರೆ ಹಿಂದೋಡುವರು
ಹಿನ್ನಡೆಯುವುದೇ ಸರಿ ಎನ್ನುವರು
ಸ್ವಾನಂದ ಟೀಕಾನಂದರು
ಸುದ್ದಿ ಪೆಟ್ಟಿಗೆಯಲಿ ಕಂಗೊಳಿಸುವರು
ವಾರ್ತಾಲಾಪದಿ ಮಿಂಚುವರು
ದಿನವಿಡಿ ಒಡಕು ಸುದ್ದಿ ವೀರರು
ತಲೆ ಕೆಡಿಸಿ ಸಂತಸ ಪಡುವರು
ಸ್ವಾನಂದ ಟೀಕಾನಂದರು
...ರಾಜೀವ ಅಜ್ಜೀಬಳ
Comments
Post a Comment