ಮುಂಗಾರು -17

ವರ್ಷಋತುವಿನ ಸಿಂಗಾರ -ಶ್ರಾವಣ- ಸದಾ ಹೃದಯಂಗಮ 


lಬಂದೇ ಬಂತು ಶ್ರಾವಣ 


ಮತ್ತೆ ಬಂದ ಶ್ರಾವಣ 

ಕೇಳಬೇಡ ಕಾರಣ 

ವರುಷಕೊಮ್ಮೆ ತಪ್ಪದೇ 

ಬಂದೇ ಬರುವ ಋತುಕ್ರಮ 


ಬೆಟ್ಟ ಗುಡ್ಡ ಕೊಳ್ಳ ಕಣಿವೆ 

ಬಯಲು ನೆಲ ಪರಿವರ್ತನ

ಹಚ್ಚ ಹಸಿರು ಹರಿದ್ವರ್ಣ 

ಪಚ್ಛೆ ಪದಕ ಶ್ರಾವಣ 


ಹಬ್ಬ ಹಬ್ಬ ಪುಣ್ಯ ಕ್ಷಣ 

ಭಕ್ತಿ ಭಾವ ಹರಿದಿನ 

ಮಳೆಯ ಹನಿ ಇಂಪು ದನಿ 

ಹಾಡ ಹೇಳೇ ಶ್ರಾವಣ 


ಒಮ್ಮೆ ಬಿಸಿಲು ಒಮ್ಮೆ ಮಳೆ 

ಏನೇ ಇದು ಹೂರಣ 

ಮುಗಿಲಿನಲ್ಲಿ ಬಿಗಿದ ಮೊಗ 

ಹನಿದು ಬಾರೇ ಶ್ರಾವಣ 


ಹೊಲಗಳನ್ನ ಹುದಿಲು ಮಾಡಿ 

ಸಸಿಗಳೂರ್ವ ಸಂಭ್ರಮ 

ಶ್ರಮದ ಬೆಮರ ತೆನೆಯಾಗಿಸಿ 

ಹಿಗ್ಗು ನೀಡೇ ಶ್ರಾವಣ 


……ರಾಜೀವ ಅಜ್ಜೀಬಳ 






Comments

Popular posts from this blog

ವಿನಾಶ ಕಾಲೇ

Message to love in nature