ದೇಶದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ 

ಒಂದೇ ಮನದಿ ನುಡಿಯುವ 


ನಾವೆಲ್ಲರೂ ಒಂದುಗೂಡಿ 

ಒಂದೇ ಮನದಿ ನುಡಿಯುವಾ 

ನಮ್ಮ ನಾಡು ಭಾರತ ಜನ್ಮಭೂಮಿ ಭಾರತ 


ಕೋಟಿ ಕೋಟಿ ಜನರಿಗೆಲ್ಲ ಒಂದೇ ತಾಯಿ ಭಾರತ 

ಕೋಟಿ ಕೋಟಿ ಕಂಠಗಳಲಿ ಒಂದೇ ಧ್ವನಿ ಭಾರತ 

ನಮ್ಮ ದೇಹ ನಮ್ಮುಸಿರು ನಮ್ಮಾತ್ಮ   ಭಾರತ 

ನಮ್ಮ ಸ್ಥಾನ ನಮ್ಮ ಮಾನ ನಮ್ಮಿರುವೇ  ಭಾರತ 

ಸಂಸ್ಕೃತಿ

ಉಳಿಯಬೇಕು ನಮ್ಮನಾಡು ನಮ್ಮ ಐಕ್ಯಭಾವದಿ 

ಅಳಿಯಬೇಕು ಕಜ್ಜೆ ಕವತೆ ನಮ್ಮ ಹೃದಯದಾಳದಿ 

ಬೆಳೆಯಬೇಕು ದೇಶವೊಂದೇ  ಎನುವ  ಸಂತತಿ 

ದೇಶ ಭಕ್ತಿ, ದೇಶ ನಿಷ್ಠೆ, ದೇಶ ಸೇವೆ  ಸಂಸ್ಕೃತಿ 


ಗಡಿ ಕಾಯುವ ವೀರ ಯೋಧ ನಮ್ಮ ಶೂರ ಪುತ್ರ 

ವೈರಿಪಡೆಗೆ ಸಿಂಹ ಸ್ವಪ್ನ ಅವನ ಬಾಳು ಸುಕೃತ 

ಹೊಲಗಳನ್ನು ಉತ್ತು ಬಿತ್ತಿ ಅನ್ನ ಕೊಡುವ  ರೈತ

ಜೈ ಜವಾನ್ ಜೈ ಕಿಸಾನ್  ಜೈ ಜವಾನ್ ಕಿಸಾನ್ 


…… ರಾಜೀವ  ಅಜ್ಜೀಬಳ 


Comments

Popular posts from this blog

ವಿನಾಶ ಕಾಲೇ

Message to love in nature